ಬೀದರ್ : ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಕಳ್ಳರ ಗ್ಯಾಂಗ್ ಗ್ಯಾಸ್ ಕಟ್ಟರ್ ಬಳಸಿ ಕರ್ನಾಟಕ ಬ್ಯಾಂಕ್‌ನ ಎಟಿಎಂನಲ್ಲಿದ್ದ ಹಣ ಲೂಟಿ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ. ಇಂದು ನಸುಕಿನ ಜಾವ 4 ಗಂಟೆಯ ಸುಮಾರಿಗೆ XUV ಕಾರ್ನಲ್ಲಿ ಬಂದ ತಂಡ
ಕೇವಲ 10 ನಿಮಿಷದಲ್ಲಿ ಎಟಿಎಂ ಮಷಿನ್ ತುಂಡರಿಸಿ ಕೃತ್ಯ ಎಸಗಿದೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೃತ್ಯ ಎಸಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬಸವಕಲ್ಯಾಣದಿಂದ ಬಂಗ್ಲಾ ಮಾರ್ಗವಾಗಿ ಮಹಾರಾಷ್ಟ್ರ ಉಮ್ಮರ್ಗಾ ಕಡೆಗೆ ಆರೋಪಿಗಳು ತೆರಳಿದ್ದಾರೆ. ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕಳ್ಳರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಎಟಿಎಂ ಯಂತ್ರದಿಂದ ಹಣ ದೋಚಿದ ಕಳ್ಳರು: ಕೆಲವು ತಿಂಗಳ ಹಿಂದೆ ತುಮಕೂರು ಎಸ್ಪಿ ಕಚೇರಿ ಪಕ್ಕದಲ್ಲಿನ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಸೇರಿದ ಎಟಿಎಂ ಯಂತ್ರದಿಂದ ಕಳ್ಳರು ಹಣ ದೋಚಿದ್ದರು. ಸುಮಾರು 2,90,000 ನಗದಿನೊಂದಿಗೆ ಪರಾರಿಯಾಗಿದ್ದರು. ಯಂತ್ರವನ್ನು ಗ್ಯಾಸ್ ಕಟರ್ ಬಳಸಿ ತುಂಡರಿಸಿದ್ದರು. ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬ್ಯಾಂಕ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಕೃತ್ಯ ಸೆರೆಯಾಗಿತ್ತು. ಎನ್ಎಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.