ಬೀದರ್: ಜಿಲ್ಲೆಯಲ್ಲಿ ಒಂದೆಡೆ ಅತಿವೃಷ್ಠಿಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದರೆ ಮತ್ತೊಂದು ಕಡೆ ಕೊರೊನಾ ಅಟ್ಟಹಾಸ ಮುಂದುವರೆದಿದೆ.
80 ಜನರಲ್ಲಿ ಕೊರೊನಾ, 5,677ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ!
ಬೀದರ್ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಇಂದು ಕೂಡ 80 ಜನರಲ್ಲಿ ಮಹಾಮಾರಿ ಕಾಣಿಸಿಕೊಂಡಿದೆ.
Bidar corona news
ಇಂದು ಒಂದೇ ದಿನ 80 ಜನರಲ್ಲಿ ಮಹಾಮಾರಿ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್, ಔರಾದ್ ಹಾಗೂ ಬೀದರ್ ತಾಲೂಕಿನಲ್ಲಿ ಸೋಂಕು ವ್ಯಾಪಕವಾಗಿ ಕಂಡು ಬಂದಿದ್ದು ಇಂದು ಆಸ್ಪತ್ರೆಯಿಂದ ಯಾರು ಕೂಡ ಬಿಡುಗಡೆಯಾಗಿಲ್ಲ.
ಈ ಮೂಲಕ ಸೋಂಕಿತರ ಸಂಖ್ಯೆ ಇದೀಗ 5,677 ಕ್ಕೆ ಏರಿಕೆಯಾಗಿದ್ದು,ಇಲ್ಲಿಯವರೆಗೆ 149 ಜನರು ಸಾವನಪ್ಪಿದ್ದಾರೆ. ಇದರ ಮಧ್ಯೆ 4,898 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 626 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.