ಬೀದರ್: ಕೇಂದ್ರ ಬಜೆಟ್ ಮಂಡನೆಯಾಗ್ತಿದ್ದು, ಈ ಬಾರಿಯ ಬಜೆಟ್ ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಇಟ್ಟಕೊಂಡಿರುವ ಜಿಲ್ಲೆಯ ಜನರು ಕೈಗಾರಿಕೆ, ನಿರಾವರಿ ಹಾಗೂ ರೈಲು ಅಭಿವೃದ್ದಿಯ ಕನಸು ಕಂಡಿದ್ದು ಉಡಾನ್ ಯೋಜನೆ ಅಡಿ ಹಾರಾಟವಾಗ್ತಿರುವ ಬೀದರ್ ವಿಮಾನ ನಿಲ್ದಾಣದ ಉನ್ನತಿಕರಣಕ್ಕೂ ಅನುದಾನದ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
2020 ಬಜೆಟ್ : ಬೀದರ್ ನಾಂದೇಡ್ ರೈಲು ಮಾರ್ಗಕ್ಕೆ ಈಗಲಾದರೂ ಸಿಗುತ್ತಾ ಗ್ರೀನ್ ಸಿಗ್ನಲ್...! - ಬಜೆಟ್ ಕುರಿತು ಬೀದರ್ ಜನರ ಪ್ರತಿಕ್ರಿಯೆ
ಈ ಬಾರಿಯ ಬಜೆಟ್ ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಇಟ್ಟಕೊಂಡಿರುವ ಜಿಲ್ಲೆಯ ಜನರು ಕೈಗಾರಿಕೆ, ನಿರಾವರಿ ಹಾಗೂ ರೈಲು ಅಭಿವೃದ್ದಿಯ ಕನಸು ಕಂಡಿದ್ದು, ಉಡಾನ್ ಯೋಜನೆ ಅಡಿ ಹಾರಾಟವಾಗ್ತಿರುವ ಬೀದರ್ ವಿಮಾನ ನಿಲ್ದಾಣದ ಉನ್ನತೀಕರಣಕ್ಕೂ ಅನುದಾನದ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
2020 ಬಜೇಟ್
ಎರಡು ದಶಕಗಳಿಂದ ಬೇಡಿಕೆಯಾಗಿಯೇ ಉಳಿದಿರುವ ಬೀದರ್ ನಾಂದೇಡ್ ಹೊಸ ರೈಲು ಮಾರ್ಗ ಸ್ಥಾಪನೆ ಮಾಡುವುದರಿಂದ ಬೀದರ್ ಜನರ ದೆಹಲಿ, ಪಂಜಾಬ್ ಸಂಚಾರ ಸುಗಮವಾಗಲಿದೆ. ಅಲ್ಲದೇ ಮೂಲೆಗುಂಪಾದ ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಈ ಭಾಗದ ನಿರೂದ್ಯೋಗ ಸಮಸ್ಯೆ ಬಗೆಹರಿದು ಇಲ್ಲಿನ ಆರ್ಥಿಕ ದುಃಸ್ಥಿತಿ ಸರಿಪಡಿಸಬಹುದು.
ಅಲ್ಲದೇ ಕಾರಂಜಾ ಜಲಾಶಯ ಹಾಗೂ ಮಾಂಜ್ರಾ ನದಿ ನೀರು ರೈತರ ಜಮಿನಿಗೆ ಬಳಸಲು, ಅಗತ್ಯ ಬೃಹತ್ ನೀರಾವರಿ ಯೋಜನೆಗಾಗಿ ಕೇಂದ್ರ ಅನುದಾನ ನೀಡುತ್ತಾ ಎಂಬ ನಿರೀಕ್ಷೆಯನ್ನ ಜನರು ವ್ಯಕ್ತಪಡಿಸಿದ್ದಾರೆ.