ಕರ್ನಾಟಕ

karnataka

ETV Bharat / state

ಶಾಲಾ ಮಕ್ಕಳ ಅಪಾಯದ ಬಸ್ ಪ್ರಯಾಣ: ಕಣ್ಮುಚ್ಚಿ ಕುಳಿತ ಸಾರಿಗೆ ಇಲಾಖೆ - Jalasangi-Dhubalagundi Humanabad Taluk Bidar District

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಜಲಸಂಗಿ-ದುಬಲಗುಂಡಿ ಗ್ರಾಮಕ್ಕೆ ಏಕೈಕ ಬಸ್ ವ್ಯವಸ್ಥೆಯಿರುವುದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಅಪಾಯಕಾರಿಯಾದ ರೀತಿಯಲ್ಲಿ ಬಾಗಿಲಲ್ಲೇ ನೇತಾಡಿಕೊಂಡು ಪ್ರಯಾಣಿಸುತ್ತಿದ್ದು, ಸಾರಿಗೆ ಇಲಾಖೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಸ್ಸಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು

By

Published : Aug 27, 2019, 11:59 PM IST

ಬೀದರ್ : ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಪಾಯಕಾರಿಯಾಗಿ ನೇತಾಡಿಕೊಂಡು ಬಸ್ಸಲ್ಲಿ ಪ್ರಯಾಣಿಸುತ್ತಿದ್ದು, ಸಾರಿಗೆ ಇಲಾಖೆ ಗಮನ ಹರಿಸದೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿ ಬಂದಿದೆ.

ಹುಮನಾಬಾದ್ ತಾಲೂಕಿನ ಜಲಸಂಗಿ-ದುಬಲಗುಂಡಿ ಭಾಗದಲ್ಲಿ ಬೆಳ್ಳಗಿನ ಹೊತ್ತು ಮಕ್ಕಳು ಶಾಲೆಗೆ ಹೊಗುವ ಸಂದರ್ಭದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಎಕೈಕ ಬಸ್ ಬರುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಸ್ ಹೊಂದಿರುವುದರಿಂದ, ಈ ಬಸ್ಸನ್ನೇ ಆಶ್ರಯಿಸಬೇಕಾದ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಬಸ್​ನಲ್ಲಿ ಸ್ಥಳದ ಕೊರತೆ ಎದುರಾಗಿ ವಿದ್ಯಾರ್ಥಿಗಳು ಬಾಗಿಲಿನಲ್ಲೆ ನೇತಾಡಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಒಂದೇ ಬಸ್ ಬರುವುದರಿಂದ ಬಸ್ ತುಂಬಿ ತುಳುಕುತ್ತಿರುತ್ತವೆ. ಆದ್ದರಿಂದ ಕೆಲ ಮಕ್ಕಳು ಶಾಲೆಗೆ ಹೋದರೆ ಇನ್ನು ಕೆಲವರು ವಾಪಸ್ ಮನೆಗೆ ಹಿಂದುರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್ಸಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು

ಬಸ್ ಏರಿದರರೂ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗಲು ಆಗದೆ ನೂರಾರು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸಕಾಲಕ್ಕೆ ಬಸ್ ಬಾರದಿರುವುದು ಮತ್ತು ಬಂದ ಬಸ್​ನಲ್ಲಿ ಪ್ರಯಾಣಿಸಲು ಅಸಾಧ್ಯವಾಗಿರುವುದು ಈ ಭಾಗದ ಮಕ್ಕಳು ಶಾಲಾ-ಕಾಲೇಜಿಗೆ ಗೈರಾಗುವಂತೆ ಮಾಡಿದೆ. ಇರುವ ಒಂದು ಬಸ್​ನಲ್ಲಿ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಆದ್ದರಿಂದ ಈಶಾನ್ಯ ಸಾರಿಗೆ ಸಂಸ್ಥೆ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪಾಸ್ ಇರುವ ಶಾಲಾ ಮಕ್ಕಳಿಗಾಗಿ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ABOUT THE AUTHOR

...view details