ಬೀದರ್: ಶೈಕ್ಷಣಿಕವಾಗಿ ತೀರಾ ಹಿಂದುಳಿದ ಗಡಿ ಜಿಲ್ಲೆ ಬೀದರ್ ಯುವಕ ಯುಪಿಎಸ್ಸಿ ಪರೀಕ್ಷೆಯಲ್ಲಿ 694ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ 694ನೇ ಸ್ಥಾನ ಪಡೆದ ಬೀದರ್ನ ವೆಂಕಟರಾಮ್ - ಯುಪಿಎಸ್ಸಿ ಪರೀಕ್ಷೆ
ಗಡಿ ಜಿಲ್ಲೆ ಬೀದರ್ನ ವೆಂಕಟರಾಮ್ ತುಳಸಿರಾಮ ನಂದಗಾವೆ ಎಂಬುವರು ಯುಪಿಎಸ್ಸಿ ಪರೀಕ್ಷೆಯಲ್ಲಿ 694ನೇ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ.
ವೆಂಕಟರಾಮ್ ತುಳಸಿರಾಮ ನಂದಗಾವೆ
ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ವೆಂಕಟರಾಮ್ ತುಳಸಿರಾಮ ನಂದಗಾವೆ ಯುಪಿಎಸ್ಸಿ ಪರಿಕ್ಷೆಯಲ್ಲಿ 694ನೇ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಗುರುನಾನಕ ದೇವ ಪಬ್ಲಿಕ್ ಶಾಲೆಯಲ್ಲಿ, ಪ್ರೌಢ ಶಿಕ್ಷಣ ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲ್ನಲ್ಲಿ, ಪಿಯುಸಿ ಇಂಟರ್ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ ವೆಂಕಟರಾಮ್ಗೆ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದೆ.