ಬೀದರ್: ವಿತರಣೆಗಾಗಿ ತಂದಿದ್ದ 63 ಚೀಲ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ, ಗ್ರಾಮಸ್ಥರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನ ಕಾರ್ಯದರ್ಶಿಗೆ ನಡು ಬೀದಿಯಲ್ಲಿ ದಿಗ್ಬಂಧನ ಹಾಕಿ ಸಖತ್ ಕ್ಲಾಸ್ ತೆಗೆದುಕೊಂಡ ಘಟನೆ ಹುಮನಾಬಾದ್ ತಾಲೂಕಿನ ಬೇನ್ ಚಿಂಚೋಳಿಯಲ್ಲಿ ನಡೆದಿದೆ.
ಗ್ರಾಮದ ಪಡಿತರ ಚೀಟಿದಾರರಿಗೆ ಸರಬರಾಜು ಮಾಡಬೇಕಿದ್ದ 63 ಚೀಲ ಅಂದ್ರೆ 31.5 ಕ್ವಿಂಟಲ್ ಅಕ್ಕಿ ನಾಪತ್ತೆಯಾಗಿದ್ದು ಪಿಕೆಪಿಎಸ್ ಸಿಬ್ಬಂದು ಮತ್ತು ಕಾರ್ಯದರ್ಶಿ ಸೇರಿ ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪಡಿತರ ಪಡೆಯಲು ಕಚೇರಿ ಬಂದಾಗಿ ದಾಸ್ತಾನು ಇಲ್ಲದ್ದು ಬೆಳಕಿಗೆ ಬಂದಿದೆ.