ಕರ್ನಾಟಕ

karnataka

By

Published : Dec 22, 2019, 8:48 PM IST

ETV Bharat / state

ಗಡಿಭಾಗದ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ : ಅಪರಾಧ ಪ್ರಕರಣ ಕುರಿತ ಮಾಹಿತಿ ವಿನಿಮಯ ಚರ್ಚೆ

ಗಡಿಯಲ್ಲಿ ನಡೆದ ಪ್ರಕರಣಗಳಲ್ಲಿ ಅರೋಪಿಗಳ ಪತ್ತೆ, ಕಾಣೆಯಾದ ಪ್ರಕರಣಗಳು, ಕಳ್ಳತನ ಧರೋಡೆ ಸೇರಿದಂತೆ ವಿವಿಧ ಪ್ರಕರಣಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಜತೆಗೆ ಗಡಿಯಲ್ಲಿ ಸಂಭವನೀಯ ಅಪರಾಧ ಪ್ರಕರಣ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಜತೆಗೆ ಗಡಿಯಲ್ಲಿ ಅಪರಾಧಿಕ ಪ್ರಕರಣ, ಸಮಾಜ ಘಾತಕ ಚಟುವಟಿಕೆ ನಿಯಂತ್ರಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಡಿಭಾಗದ ಮೂರು ರಾಜ್ಯದ ಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದರು.

bidar-basavakalyan-border-district-police-meeting
ಗಡಿಭಾಗದ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ

ಬಸವಕಲ್ಯಾಣ:ನಗರದ ಹೊರ ವಲಯದಲ್ಲಿರುವ ಬಿಕೆಡಿಬಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಮೂರು ರಾಜ್ಯಗಳ ಗಡಿ ಭಾಗದ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಅವರ ಅಧ್ಯಕ್ಷತೆಯಲ್ಲಿ ನಡೆದ ಬೀದರ್ ಜಿಲ್ಲಾ ಗಡಿ ಅಪರಾಧ ಸಭೆಯಲ್ಲಿ ಗಡಿಯಲ್ಲಿಯ ವಿವಿಧ ಅಪರಾಧ ಪ್ರಕರಣಗಳ ಕುರಿತು ಪರಸ್ಪರ ಮಾಹಿತಿ ವಿನಿಮಯ ನಡೆಯಿತು. ಗಡಿಯಲ್ಲಿ ನಡೆದ ಪ್ರಕರಣಗಳಲ್ಲಿ ಅರೋಪಿಗಳ ಪತ್ತೆ, ಕಾಣೆಯಾದ ಪ್ರಕರಣಗಳು, ಕಳ್ಳತನ ಧರೋಡೆ ಸೇರಿದಂತೆ ವಿವಿಧ ಪ್ರಕರಣಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಜತೆಗೆ ಗಡಿಯಲ್ಲಿ ಸಂಭವನೀಯ ಅಪರಾಧ ಪ್ರಕರಣ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಜತೆಗೆ ಗಡಿಯಲ್ಲಿ ಅಪರಾಧಿಕ ಪ್ರಕರಣ, ಸಮಾಜ ಘಾತಕ ಚಟುವಟಿಕೆ ನಿಯಂತ್ರಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದರು.

ಗಡಿಭಾಗದ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ

ಹುಮನಾಬಾದ ಡಿವೈಎಸ್ಪಿ ಮಹೇಶ್ವರಪ್ಪ, ಬೀದರ್ ಬಸವೇಶ್ವರ ಹೀರಾ, ಭಾಲ್ಕಿ ವೆಂಕನಗೌಡ ಪಾಟೀಲ್, ನೀಲಂಗಾ ಡಿವೈಎಸ್ಪಿ ಡಾ.ಎನ್.ವಿ.ದೇಶಮುಖ, ಉಮರ್ಗಾ ಡಿವೈಎಸ್ಪಿ ಅನುರಾಧಾ ಉಡಮಾಲೆ, ಜಹಿರಾಬಾದ ಡಿವೈಎಸ್ಪಿ ಗಣಪತಿ ಜಾಧವ, ಸಂಗಾರೆಡ್ಡಿ ಡಿವೈಎಸ್ಪಿ ಆರ್ಎಸ್ಎನ್ ರಾಜು, ದೇಗಲೂರ ಡಿವೈಎಸ್ಪಿ ರಮೇಶ ಎಂ, ಬಸವಕಲ್ಯಾಣ ಸಿಪಿಐ ಮಲ್ಲಿಕಾರ್ಜುನ ಯಾತನೂರ, ಮಹೇಶಗೌಡ ಪಾಟೀಲ, ಪಿಎಸ್ಐ ಸುನೀಲಕುಮರ ಹಾಗೂ ಜಿಲ್ಲೆ ಹಾಗೂ ನೆರೆ ಜಿಲ್ಲೆಯ ವಿವಿಧ ವಲಯ ಮತ್ತು ಠಾಣೆಯ ಸಿಪಿಐ ಮತ್ತು ಪಿಎಸ್ಐ, ಎಎಸ್ಐಗಳು ಭಾಗವಹಿಸಿದ್ದರು

ABOUT THE AUTHOR

...view details