ಕರ್ನಾಟಕ

karnataka

ETV Bharat / state

ಬೀದರ್​: ಎಟಿಎಂ ದರೋಡೆ ಯತ್ನ ವಿಫಲ.. - ಕೆನರಾ ಬ್ಯಾಂಕ್ ಎಟಿಎಂ ದರೋಡೆ ಯತ್ನ ವಿಫಲ

ನಗರದ ನೌಬಾದ್ ಬಳಿಯ ಕೆನರಾ ಬ್ಯಾಂಕ್​ ಎಟಿಎಂಗೆ ನುಗ್ಗಿದ ದರೋಡೆಕೋರರು ರಾಡ್‌ನಿಂದ ಎಟಿಎಂ ಒಡೆದು ಕಳ್ಳತನ ಯತ್ನ ಮಾಡಿ ವಿಫಲರಾಗಿದ್ದಾರೆ.

ATM robbery
ಎಟಿಎಂ ದರೋಡೆ

By

Published : Feb 25, 2020, 1:40 PM IST

ಬೀದರ್:ಬ್ಯಾಂಕ್​ವೊಂದರ ಎಟಿಎಂ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ನಗರದ ನೌಬಾದ್ ಬಳಿಯ ಕೆನರಾ ಬ್ಯಾಂಕ್​ ಎಟಿಎಂನಲ್ಲಿ ನಡೆದಿದೆ.

ತಡರಾತ್ರಿ ಯಾರೂ ಇಲ್ಲದ ವೇಳೆಯಲ್ಲಿ ನೌಬಾದ್ ಬಳಿಯ ಕೆನರಾ ಬ್ಯಾಂಕ್ ಎಟಿಎಂಗೆ ನುಗ್ಗಿದ ದರೋಡೆಕೋರರು ರಾಡ್‌ನಿಂದ ಎಟಿಎಂ ಒಡೆದು ಕಳ್ಳತನ ಯತ್ನ ಮಾಡಿ ವಿಫಲರಾಗಿದ್ದಾರೆ.

ಎಟಿಎಂ ದರೋಡೆ ಯತ್ನ ವಿಫಲ..

ಘಟನೆ ನಂತರ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್, ಡಿವೈಎಸ್​ಪಿ ಬಸವೇಶ್ವರ ಹೀರಾ ಹಾಗೂ ಪಿಎಸ್​ಐ ಗುರು ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್ ಬ್ಯಾಂಕ್‌ನ ಜೆಸಿಬಿ ಮೂಲಕ ಕಳ್ಳತನ ಮಾಡಲು ಹೋಗಿ ವಿಫಲ ಯತ್ನ ಮಾಡಿದ ನಂತರ ಈಗ ಬೀದರ್‌ನಲ್ಲೂ ಎಟಿಎಂ ಕಳವಿಗೆ ವಿಫಲ ಯತ್ನ ನಡೆದಿದೆ.

ABOUT THE AUTHOR

...view details