ಕರ್ನಾಟಕ

karnataka

ETV Bharat / state

ಬೀದರ್: 52 ಜನರಿಗೆ ಸೋಂಕು... 67 ಸೋಂಕಿತರು ಗುಣಮುಖ - 52 people infected by corona

ಬೀದರ್​ ಜಿಲ್ಲೆಯಲ್ಲಿ ಇಂದು 52 ಜನರಿಗೆ ಸೋಂಕು ತಗುಲಿದೆ. 67 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 546 ಜನರು ಕೊರೊನಾ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀದರ್
ಬೀದರ್

By

Published : Sep 16, 2020, 10:51 PM IST

ಬೀದರ್:ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ 52 ಜನರಿಗೆ ಸೋಂಕು ತಗುಲಿದೆ. 67 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಓರ್ವರು ಸಾವನ್ನಪ್ಪಿದ್ದಾರೆ.

ಕೋವಿಡ್​-19 ಅಂಕಿಅಂಶಗಳ ವಿವರ

ಜಿಲ್ಲೆಯ ಭಾಲ್ಕಿ, ಹುಮನಾಬಾದ್, ಬೀದರ್, ಔರಾದ್ ಹಾಗೂ ಬಸವಕಲ್ಯಾಣ ತಾಲೂಕಿನಾದ್ಯಂತ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹತೋಟಿಗೆ ಬರ್ತಿದ್ದು, ಗುಣಮುಖರಾಗಿ ಬಿಡುಗಡೆಯಾಗಿರುವವರ ಸಂಖ್ಯೆಯೂ ಹೆಚ್ಚಳವಾಗ್ತಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5597ಕ್ಕೆ ಏರಿಕೆಯಾಗಿದ್ದು, 4898 ಜನ ಸೋಂಕಿತರು ಇಲ್ಲಿಯವರೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 149 ಜನರು ಬಲಿಯಾಗಿದ್ದು, 546 ಜನರು ಕೊರೊನಾ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details