ಬೀದರ್:ಗಡಿ ಜಿಲ್ಲೆ ಬೀದರ್ನಲ್ಲಿಇಂದುಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸುಮಾರು 1 ಕೋಟಿ 40 ಲಕ್ಷ ಮೌಲ್ಯದ 150 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಐಜಿಪಿ ಅನುಪಮ್ ಅಗರವಾಲ್,"ಸೋಮವಾರದಂದು ಔರಾದ ತಾಲೂಕಿನ ಏಕಂಬಾ ಚೆಕ್ ಪೋಸ್ಟ್ ಬಳಿ ತೆಲಂಗಾಣ ಹಾಗೂ ಬೀದರ್ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಸೇರಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಔರಾದ್ ತಾಲೂಕಿನ ವೃತ್ತ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ನೇತೃತ್ವದ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿ, 1 ಕೋಟಿ 30 ಲಕ್ಷ ಮೌಲ್ಯದ 130 ಕೆಜಿ ಗಾಂಜಾ, 2 ಲಕ್ಷ ನಗದು ಹಾಗೂ ಬೊಲೆರೋ ವಾಹನ, ಎರಡು ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಭಾನುವಾರ ನಡೆದ ಇನ್ನೊಂದು ಪ್ರಕರಣದಲ್ಲಿ ಬೀದರ್ನಿಂದ ಹುಮನ್ನಾಬಾದ್ಗೆ ಬಸ್ ಮೂಲಕ ಗಾಂಜಾ ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯಿಂದ 10 ಲಕ್ಷ ಮೌಲ್ಯದ 20 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಬಂಧಿತ ಆರೋಪಿ ತೆಲಂಗಾಣ ಮೂಲದವನು ಎಂದು ಗುರುತಿಸಲಾಗಿದೆ ಎಂದರು. ಬೀದರ್ ಜಿಲ್ಲೆಯು ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳೊಂದಿಗೆ ತನ್ನ ಗಡಿ ಹಂಚಿಕೊಂಡಿದ್ದರಿಂದ ಇಲ್ಲಿಂದ ಮಾದಕ ವಸ್ತುಗಳು ಸಾಗಣೆ ಮಾಡುವ ಸಂಭವವಿದೆ ಆ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸರು ಅಕ್ರಮವಾಗಿ ಸಾಗಣೆ ಮಾಡುವ ಮಾದಕವಸ್ತುಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇದರ ಫಲವಾಗಿ ಕಳೆದ ಮೂರು ತಿಂಗಳಿನಲ್ಲಿ 11 ಪ್ರಕರಣಗಳಲ್ಲಿ ಸುಮಾರು 800 ಕೆಜಿ ಗಾಂಜಾ ವಶಪಡಿಸಿಕೊಂಡು 34 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.