ಬೀದರ್:ಕೊರೊನಾ ಅಟ್ಟಹಾಸ ಜಿಲ್ಲೆಯಲ್ಲಿ ಮುಂದುವರೆದಿದೆ. ಇಂದು 119 ಜನರಿಗೆ ಸೋಂಕು ತಗುಲಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಬೀದರ್: 119 ಜನರಿಗೆ ಕೊರೊನಾ, ಒಂದು ಸಾವು - 119 people have corona
ಬೀದರ್ ಜಿಲ್ಲೆಯಲ್ಲಿ ಇಂದು ಪತ್ತೆಯಾದ ಕೊರೊನಾ ಸೋಂಕಿತರು, ಗುಣಮುಖರಾದವರು ಹಾಗು ಮೃತಪಟ್ಟವರ ವಿವರ ಇಲ್ಲಿದೆ.
ಬೀದರ್
ಜಿಲ್ಲೆಯ ಔರಾದ್ನಲ್ಲಿ-17, ಬಸವಕಲ್ಯಾಣ-07, ಭಾಲ್ಕಿ-34, ಬೀದರ್-42, ಹುಮನಾಬಾದ್-14, ಅನ್ಯರಾಜ್ಯ-03 ಜನರಲ್ಲಿ ಸೋಂಕು ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,577ಕ್ಕೆ ಏರಿಕೆಯಾಗಿದೆ. 108 ಜನರು ಸೋಂಕಿಗೆ ಬಲಿಯಾಗಿದ್ದು, ಇಂದು 71 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2,505 ಜನರು ಗುಣಮುಖರಾಗಿದ್ದು, 960 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.