ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ಭಾರತೀಯ ಸೇನಾ ನೇಮಕಾತಿ ರ್‍ಯಾಲಿ: ಸಚಿವ ಭಗವಂತ ಖೂಬಾ ಭೇಟಿ - ಈಟಿವಿ ಭಾರತ ಕನ್ನಡ

ರ್‍ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸಚಿವ ಭಗವಂತ ಖೂಬಾ ಶುಭ ಹಾರೈಸಿದರು.

bhagwanth-khuba-visit-indian-army-recruitment-rally
ಬೀದರ್​ನಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ; ಸಚಿವ ಭಗವಂತ ಖೂಬಾ ಭೇಟಿ

By

Published : Dec 10, 2022, 1:58 PM IST

ಬೀದರ್​: ತಾಯಿ ಭಾರತ ಮಾತೆಗೆ ಸೇವೆ ಮಾಡಲು ತಮ್ಮ ಉತ್ಸಾಹ ಕಂಡು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು. ಅವರು ಇಂದು ಬೆಳಗ್ಗೆ ಅಗ್ನಿವೀರ್ ಯೋಜನೆಯಡಿ ಬೀದರ್​ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತೀಯ ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತ ಸರ್ಕಾರದ ರಕ್ಷಣಾ ಇಲಾಖೆ ಅಗ್ನಿವೀರ್ ಯೋಜನೆಯಡಿ ಈ ಸೇನಾ ನೇಮಕಾತಿ ರ್‍ಯಾಲಿಯನ್ನು ನಮ್ಮ ಭಾಗದಲ್ಲಿ ನಡೆಸುತ್ತಿದೆ. ಇದರಲ್ಲಿ 70 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಭಾಗವಹಿಸಿರುವುದು ಸಂತಸದ ವಿಷಯವಾಗಿದೆ ಎಂದರು.

ಬೀದರ್​ನಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ; ಸಚಿವ ಭಗವಂತ ಖೂಬಾ ಭೇಟಿ

ಭಾರತೀಯ ಸೇನೆಯ ನಿಯಮದಂತೆ ಆಯ್ಕೆ ನಡೆಯುತ್ತಿದೆ. ಯುವಕರು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಇದರಲ್ಲಿ ತೋರಿಸಿ ಆಯ್ಕೆಯಾಗಬೇಕು. ಮತ್ತು ನೀವು ಯಾವತ್ತಿಗೂ ಎದೆ ಗುಂದದೆ ಆತ್ಮವಿಶ್ವಾಸದಿಂದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಬೇಕು. ತಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಬ್ರಿಗೇಡಿಯರ್ ಎ.ಎಸ್ ವಾಲಿಂಬೆ ಡಿಡಿಜಿ ಅವರು ಕೇಂದ್ರ ಸಚಿವರಾದ ಭಗವಂತ ಖೂಬಾ ಅವರಿಗೆ ಸೇನಾ ನೇಮಕಾತಿ ಕುರಿತು ಮಾಹಿತಿ ನೀಡಿದರು. ಸಚಿವರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವಿಧ ಹಂತಗಳ ಆಯ್ಕೆಯ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕರ್ನಲ್‌ ನಿಶಾಂತ ಡಿ.ಐ.ಆರ್, ಆರ್.ಟಿ.ಜಿ ಬೆಳಗಾವಿ, ಕರ್ನಲ್ ರವಿಕಾಂತ, ಬೀದರ ತಹಶೀಲ್ದಾರ್​ ಅಣ್ಣಾರಾವ್ ಪಾಟೀಲ್, ಮುಖ್ಯ ಪಶು ವೈದ್ಯಾಧಿಕಾರಿ ಗೌತಮ ಅರಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಐಎಂಎ ಪಾಸಿಂಗ್​ ಔಟ್ ಪರೇಡ್​:314 ಕೆಡೆಟ್​ಗಳು ಭಾರತೀಯ ಸೇನೆಗೆ ಸೇರ್ಪಡೆ

ABOUT THE AUTHOR

...view details