ಬಸವಕಲ್ಯಾಣ (ಬೀದರ್):ತಾಲೂಕಿನ ಒಂದೇ ಕುಟುಂಬದ ಇಬ್ಬರಲ್ಲಿ ಇಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಬಸವಕಲ್ಯಾಣ: ಮಾವ-ಸೊಸೆಗೆ ತಗುಲಿದ ಕೊರೊನಾ - corona news
ಬಸವಕಲ್ಯಾಣ ತಾಲೂಕಿನ ಒಂದೇ ಕುಟುಂಬದ ಇಬ್ಬರಲ್ಲಿ ಇಂದು ಕೊರೊನಾ ಸೋಂಕು ಪತ್ತೆಯಾಗಿದೆ.

ಬಸವಕಲ್ಯಾಣ
ತಾಲೂಕಿನ ಮೋರಖಂಡಿ ಗ್ರಾಮದ 61 ವರ್ಷದ ವೃದ್ಧ ಹಾಗೂ 25 ವರ್ಷದ ಮಹಿಳೆಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಸೋಂಕಿತರು ಒಂದೇ ಕುಟುಂಬದವರಾಗಿದ್ದು, ಜೂನ್ 26ರಂದು ವೃದ್ಧನ ಪತ್ನಿ ಕೊರೊನಾದಿಂದ ಮೃತಪಟ್ಟಿದ್ದರು.
ಹೀಗಾಗಿ ಮೃತ ಮಹಿಳೆ ಪ್ರಥಮ ಸಂಪರ್ಕಕ್ಕೆ ಬಂದಿದ್ದ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 22 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಮೃತ ಮಹಿಳೆ ಪತಿ ಹಾಗೂ ಸೊಸೆಗೆ ಪಾಸಿಟಿವ್ ಬಂದಿದ್ದು, ಉಳಿದವರ ವರದಿ ನೆಗೆಟಿವ್ ಎಂದು ತಿಳಿದು ಬಂದಿದೆ.