ಬಸವಕಲ್ಯಾಣ:ಹುಲಸೂರಿನಲ್ಲಿ ಜಗದ್ಗುರು ಅಲ್ಲಮಪ್ರಭು ದೇವರ ಶೂನ್ಯ ಪೀಠ ಅನುಭವ ಮಂಟಪದಿಂದ ಆಯೋಜಿಸಿಲಾಗಿದ್ದ ಶರಣ-ಸಂಸ್ಕೃತಿ ಉತ್ಸವ ಹಾಗೂ ಡಾ. ಶಿವಾನಂದ ಸ್ವಾಮೀಜಿ ಅವರ 68ನೇ ಜನ್ಮದಿನದ ನಿಮಿತ್ತ ಇಂದು ಗ್ರಾಮದಲ್ಲಿ ವಚನ ಸಾಹಿತ್ಯದ ರಥೋತ್ಸವ ವೈಭವದಿಂದ ಜರುಗಿತು.
ಶರಣ ಸಂಸ್ಕೃತಿ ಉತ್ಸವ: ಹುಲಸೂರನಲ್ಲಿ ವೈಭವದ ವಚನ ರಥೋತ್ಸವ - ಬಸವಕಲ್ಯಾಣ ಶರಣ ಸಂಸ್ಕೃತಿ ಉತ್ಸವ ಸುದ್ದಿ
ಜಗದ್ಗುರು ಅಲ್ಲಮಪ್ರಭು ದೇವರ ಶೂನ್ಯ ಪೀಠ ಅನುಭವ ಮಂಟಪದಿಂದ ಆಯೋಜಿಸಿಲಾಗಿದ್ದ ಶರಣ-ಸಂಸ್ಕೃತಿ ಉತ್ಸವ ಹಾಗೂ ಡಾ. ಶಿವಾನಂದ ಸ್ವಾಮೀಜಿ ಅವರ 68ನೇ ಜನ್ಮದಿನದ ನಿಮಿತ್ತ ವಚನ ಸಾಹಿತ್ಯದ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಜಾನಪದ ಕಾಲಾ ತಂಡಗಳ ಕೋಲಾಟ ಸೇರಿದಂತೆ ಮಹಿಳೆಯರು ರಥ ಎಳೆದದ್ದು ವಿಶೇಷವಾಗಿತ್ತು.
ತಹಶೀಲ್ದಾರ ಸಾವಿತ್ರಿ ಸಲಗರ್ ಅನುಭವ ಮಂಟಪದಿಂದ ವಚನ ಸಾಹಿತ್ಯದ ಗ್ರಂಥಗಳನ್ನು ತೆಲೆ ಮೇಲೆ ಹೊತ್ತುಕೊಂಡು ಬಂದು ರಥದಲ್ಲಿ ಇಟ್ಟು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಅಲ್ಲಮಪ್ರಭು ದೇವರ ಶೂನ್ಯ ಪೀಠ ಅನುಭವ ಮಂಟಪದಿಂದ ಆರಂಭವಾದ ವಚನ ರಥೋತ್ಸವವನ್ನು ಗ್ರಾಮದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು. ಬಸವೇಶ್ವರರಿಗೆ ಜಯವಾಗಲಿ, ವಚನ ಸಾಹಿತ್ಯಕ್ಕೆ ಜಯವಾಗಲಿ ಎಂದು ಜೈಯ ಘೊಷಣೆಗಳೊಂದಿಗೆ ಮಹಿಳೆಯರು ರಥ ಎಳೆದಿದ್ದು ಗಮನ ಸೆಳೆಯಿತು.
ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಲಕ್ಷ್ಮೀ ವೃತ್ತದವರೆಗೆ ಸಾಂಸ್ಕೃತಿಕ ವೈಭವದೊಂದಿಗೆ ರಥೋತ್ಸವ. ವಾದ್ಯ, ಮೇಳಗಳೊಂದಿಗೆ ನಡೆದ ರಥೋತ್ಸವದಲ್ಲಿ ಮಹಿಳೆಯರು ಕುಣಿದು ಕುಪ್ಪಳಿಸಿದರು. ಅಲ್ಲಮಪ್ರಭು ದೇವರು, ಸೋಮೆಶ್ವರ, ಲಕ್ಷ್ಮೀ ದೇವಾಲಯದ ಮಹಿಳಾ ಭಜನಾ ತಂಡದವರ ಕೋಲಾಟ ನೋಡುಗರ ಗಮನ ಸೆಳೆಯಿತು.