ಕರ್ನಾಟಕ

karnataka

ETV Bharat / state

ಬಸವಕಲ್ಯಾಣ: ಬಡ ಮಹಿಳೆಯ ಪಿಂಚಣಿ ಕುರಿತು ವಿಚಾರಿಸಲು ಹೋದ ಬಿಜೆಪಿ ನಾಯಕನ ಮೇಲೆ ಪೋಸ್ಟ್ ಮ್ಯಾನ್‌ನಿಂದ ಹಲ್ಲೆ - Postman attack on BJP taluk general secretary

ಬಸವಕಲ್ಯಾಣದ ಹಿರನಾಗಾಂವ ಗ್ರಾಮದ ಬಡ ಮಹಿಳೆಗೆ ಮಾಸಿಕ ಪಿಂಚಣಿ ಹಣ ಪಾವತಿಸುವಂತೆ ಮನವಿ ಮಾಡಲು ಹೋದ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮೇಲೆ ಪೋಸ್ಟ್ ಮ್ಯಾನ್ ಹಾಗೂ ಆತನ ಕುಟುಂಬದವರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ಆಸ್ಪತ್ರೆಗೆ ಭೇಟಿ
ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ಆಸ್ಪತ್ರೆಗೆ ಭೇಟಿ

By

Published : Aug 18, 2020, 10:07 PM IST

Updated : Aug 19, 2020, 1:19 AM IST

ಬಸವಕಲ್ಯಾಣ (ಬೀದರ್​): ವೃದಾಪ್ಯ ಯೋಜನೆಯಡಿ ಸರ್ಕಾರದಿಂದ ಬಡ ಜನರಿಗೆ ಸಿಗುವ ಮಾಸಿಕ ಪಿಂಚಣಿ ಹಣ ಪಾವತಿಸುವಂತೆ ಮನವಿ ಮಾಡಿದ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮೇಲೆ ಪೋಸ್ಟ್ ಮ್ಯಾನ್ ಹಾಗೂ ಆತನ ಕುಟುಂಬದವರು, ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹಿರನಾಗಾಂವ ಗ್ರಾಮದಲ್ಲಿ ನಡೆದಿದೆ.

ಹಣಮಂತ ಧನಶಟ್ಟಿ ಹಲ್ಲೆಗೊಳಗಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ. ತಮ್ಮ ಗ್ರಾಮದ ಬಡ ಮಹಿಳೆಗೆ ಕಳೆದ 5 ತಿಂಗಳಿಂದ ಮಾಸಿಕ ಪಿಂಚಣಿ ಹಣ ಪಾವತಿಸದ ಹಿನ್ನೆಲೆ, ಪೋಸ್ಟ್ ಮ್ಯಾನ್ ಬಳಿ ತೆರಳಿದ ಧನಶಟ್ಟಿ ಹಣ ಪಾವತಿಸುವಂತೆ ಮನವಿ ಮಾಡಿದ್ದಾರೆ. ಅದನ್ನು ಕೇಳಲು ನಿನೇನು ಸರ್ಕಾರಿ ಅಧಿಕಾರಿನಾ ? ಎಂದು ಪೋಸ್ಟ್ ಮ್ಯಾನ್ ಪ್ರಶ್ನಿಸಿದ್ದಾನೆ.

ಬಡ ಮಹಿಳೆಯ ಪಿಂಚಣಿ ಕುರಿತು ವಿಚಾರಿಸಲು ಹೋದ ಬಿಜೆಪಿ ನಾಯಕನ ಮೇಲೆ ಪೋಸ್ಟ್ ಮ್ಯಾನ್‌ನಿಂದ ಹಲ್ಲೆ

ಈ ನಡುವೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಾದ-ಪ್ರತಿವಾದ ನಡೆದಿದ್ದು, ಪೋಸ್ಟ್ ಮ್ಯಾನ್ ಹಾಗೂ ಆತನ ಪುತ್ರರು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಹಣಮಂತ ಧನಶಟ್ಟಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಖೂಬಾ ಭೇಟಿ:

ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಣಮಂತ ಧನಶೆಟ್ಟಿ ಮೇಲೆ ಹಲ್ಲೆ ನಡೆದು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದ ಬಳಿಕ ಇಲ್ಲಿಯ ಮಾಜಿ ಶಾಸಕ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಘಟನೆಗೆ ಬಗ್ಗೆ ಮಾಹಿತಿ ಪಡೆದ ಮಾಜಿ ಶಾಸಕರು, ಆರೋಪಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್​ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೂರು, ಪ್ರತಿ ದೂರು:

ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಸ್ಟ್ ಮ್ಯಾನ್ ಚನ್ನಪ್ಪ ಅಳ್ಳಿಕಟ್ಟಿ ಹಾಗೂ ಆತನ ಪುತ್ರನ ವಿರದ್ಧ ಹಣಮಂತ ಧನಶಟ್ಟಿ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಹಣಮಂತ ಧನಶಟ್ಟಿ ಹಾಗೂ ಆತನ ಸಂಗಡಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾಲ್ಕು ಜನರ ವಿರುದ್ಧ ಪೋಸ್ಟ್ ಮ್ಯಾನ್ ದೂರು ನೀಡಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದ್ದು. ಪಿಎಸ್ಐ ಅರುಣಕುಮಾರ ನೇತೃತ್ವದ ಪೊಲೀಸರ ತಂಡ ತನಿಖೆ ಮುಂದುವರೆಸಿದೆ.

Last Updated : Aug 19, 2020, 1:19 AM IST

ABOUT THE AUTHOR

...view details