ಬಸವಕಲ್ಯಾಣ: ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದ ಆರೋಪದ ಮೇಲೆ ಇಲ್ಲಿಯ ನಗರಸಭೆ ಪೌರಾಯುಕ್ತ ಸುರೇಶ ಬಬಲಾದ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ: ಎಚ್.ಆರ್. ಮಹಾದೇವ ಅವರು ಆದೇಶ ಹೊರಡಿಸಿದ್ದಾರೆ.
ಅಕ್ರಮ ಕಟ್ಟಡಗಳಿಗೆ ಅನುಮತಿ: ಬಸವಕಲ್ಯಾಣ ನಗರಸಭೆ ಪೌರಾಯುಕ್ತ ಅಮಾನತು - Basavakalyana Municipality
ಬಸವಕಲ್ಯಾಣ ನಗರಸಭೆ ಪೌರಾಯುಕ್ತ ಸುರೇಶ ಬಬಲಾದ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರು ಆದೇಶ ಹೊರಡಿಸಿದ್ದಾರೆ.
basavakalyana-municipal-council-suspended
ನಗರದ ತ್ರಿಪುರಾಂತ ಸೇರಿದಂತೆ ವಿವಿಧಡೆ ಸರ್ಕಾರಿ ಸ್ಥಳದಲ್ಲಿ ಹಾಗೂ ಲೇಔಟ್ಗಳಲ್ಲಿ ಉದ್ಯಾನ ವನಕ್ಕಾಗಿ ಮೀಸಲಿಟ್ಟ ಸ್ಥಳಗಳಲ್ಲಿ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿರುವುದು, ಪರವಾನಗಿ ಇಲ್ಲದ ಲೇಔಟ್ಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವುದು ಸೇರಿದಂತೆ ಇತರ ಆರೋಪಗಳ ಕುರಿತು ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು, ಪೌರಾಯುಕ್ತರ ವಿರುದ್ಧ ಸಲ್ಲಿಸಲಾದ ದೂರಿನಲ್ಲಿ ಸತ್ಯಾಂಶಗಳು ಕಂಡು ಬಂದ ಹಿನ್ನೆಲೆ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.