ಬೆಂಗಳೂರು: ಮೂರು ಕ್ಷೇತ್ರದ ಉಪಚುನಾವಣೆಗೆ ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ, ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಇಂದು ಬಿ ಫಾರಂ ಪಡೆದುಕೊಂಡರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ಬಸವಕಲ್ಯಾಣ ಅಭ್ಯರ್ಥಿ ಶರಣು ಸಲಗರ್, ಬಿಜೆಪಿ ಸಂಪ್ರದಾಯದಂತೆ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಬೀದರ್ ಸಂಸದ ಭಗವಂತ ಖೂಬಾ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲು ಅವರಿಂದ ಬಿ ಫಾರಂ ಪಡೆದುಕೊಂಡರು. ಅಭ್ಯರ್ಥಿಗೆ ಬಿ ಫಾರಂ ವಿತರಿಸಿದ ನಾಯಕರು ಶುಭ ಕೋರಿದರು.