ಬಸವಕಲ್ಯಾಣ( ಬೀದರ್): ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಬಸವಕಲ್ಯಾಣ ನಗರದಲ್ಲಿ ಕೊರೊನಾಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಬಸವಕಲ್ಯಾಣದಲ್ಲಿ ಕೊರೊನಾಗೆ ಓರ್ವ ಬಲಿ: ಮೃತರ ಸಂಖ್ಯೆ 8ಕ್ಕೆ ಏರಿಕೆ - Death toll rises to 8
ಬಸವಕಲ್ಯಾಣ ನಗರದ ಶಾಹುಸೇನ್‌ಗಲ್ಲಿಯ 40 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಈ ಮೂಲಕ ಮೃತರ ಸಂಖ್ಯೆ ಏಂಟಕ್ಕೆ ಏರಿದೆ. ಇದುವರೆಗೆ ತಾಲೂಕಿನಲ್ಲಿ 255 ಜನ ಸೋಂಕಿತರಿದ್ದು, 200ಕ್ಕೂ ಅಧಿಕ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
![ಬಸವಕಲ್ಯಾಣದಲ್ಲಿ ಕೊರೊನಾಗೆ ಓರ್ವ ಬಲಿ: ಮೃತರ ಸಂಖ್ಯೆ 8ಕ್ಕೆ ಏರಿಕೆ ಬಸವಕಲ್ಯಾಣದಲ್ಲಿ ಕೊರೊನಾಗೆ ಓರ್ವ ವ್ಯಕ್ತಿ ಬಲಿಬಸವಕಲ್ಯಾಣದಲ್ಲಿ ಕೊರೊನಾಗೆ ಓರ್ವ ವ್ಯಕ್ತಿ ಬಲಿ](https://etvbharatimages.akamaized.net/etvbharat/prod-images/768-512-7920280-87-7920280-1594048559339.jpg)
ಬಸವಕಲ್ಯಾಣದಲ್ಲಿ ಕೊರೊನಾಗೆ ಓರ್ವ ವ್ಯಕ್ತಿ ಬಲಿ
ನಗರದ ಶಾಹುಸೇನ್‌ಗಲ್ಲಿಯ 40 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾನೆ. ಕಳೆದ ಜೂನ್ 25ರಂದು ಈತ ಹೃದಯಾಘಾತಕ್ಕೊಳಗಾಗಿದ್ದ. ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಆಗಮಿಸುವಾಗ ಮಾರ್ಗಮಧ್ಯೆದಲ್ಲಿಯೇ ಮೃತಪಟ್ಟಿದ್ದ. ಈ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಸೋಮವಾರದ ವರದಿಯಲ್ಲಿ ದೃಢಪಟ್ಟಿದೆ.
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೆ, ಬಲಿಯಾದವರ ಸಂಖ್ಯೆಯೂ ಏರುತ್ತಿದೆ. ಇದುವರೆಗೆ ತಾಲೂಕಿನಲ್ಲಿ 255 ಜನ ಸೋಂಕಿತರಿದ್ದು, 200ಕ್ಕೂ ಅಧಿಕ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.