ಬಸವಕಲ್ಯಾಣ ( ಬೀದರ್): ಮಕ್ಕಳಾಗಲಿಲ್ಲವೆಂದು ನೊಂದ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ನಗರದ ಕುಂಬಾರಪಾಳ್ಯಾ ಗಲ್ಲಿಯಲ್ಲಿ ನಡೆದಿದೆ. ಜಗದೇವಿ ಲೋಕೇಶ ಚಿಟಗುಪ್ಪೆ (25) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಸವಕಲ್ಯಾಣ: ಮಕ್ಕಳಾಗಿಲ್ಲವೆಂದು ಮನನೊಂದು ಗೃಹಿಣಿ ಆತ್ಮಹತ್ಯೆ - PSI Sunilakumara
ಬೀದರ್ ಸಮೀಪದ ಅಲಿಯಂಬರ ಗ್ರಾಮದ ಜಗದೇವಿ ಎನ್ನುವವರನ್ನು ಇಲ್ಲಿಯ ಲೋಕೇಶ್ ಎಂಬಾತನೊಂದಿಗೆ ಕೊಟ್ಟು ಕಳೆದ ಮೂರುವರೆ ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇದುವರೆಗೆ ಮಕ್ಕಳಾಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪಾಲಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ: ಮಕ್ಕಳಾಗಿಲ್ಲವೆಂದು ಮನನೊಂದು ಗೃಹಿಣಿ ಆತ್ಮಹತ್ಯೆ
ಬೀದರ್ ಸಮೀಪದ ಅಲಿಯಂಬರ ಗ್ರಾಮದ ಜಗದೇವಿ ಎನ್ನುವವರನ್ನು ಇಲ್ಲಿಯ ಲೋಕೇಶ್ ಎಂಬಾತನೊಂದಿಗೆ ಕೊಟ್ಟು ಕಳೆದ ಮೂರುವರೆ ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇದುವರೆಗೆ ಮಕ್ಕಳಾಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪಾಲಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುದ್ದಿ ತಿಳಿದ ತಹಶೀಲ್ದಾರ್ ಸಾವಿತ್ರಿ ಸಲಗರ್, ಪಿಎಸ್‌ಐ ಸುನೀಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.