ಬೀದರ್: ಕೊರೊನಾ ವೈರಸ್ ಅಟ್ಟಹಾಸದ ನಡುವೆ ಗಡಿ ಜಿಲ್ಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಬಸವ ಜಯಂತಿ ಆಚರಿಸಲಾಯಿತು.
ಬೀದರ್ನಲ್ಲಿ ಸರಳ ಬಸವ ಜಯಂತಿ ಆಚರಣೆ - ಕೊರೊನಾ ವೈರಸ್\
ರಾಜ್ಯದಲ್ಲಿ ಕೋವಿಡ್ ಭೀತಿಯಿಂದಾಗಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಬೀದರ್ನಲ್ಲಿ ಸಚಿವ ಪ್ರಭು ಚೌವ್ಹಾಣ್, ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಜಯಂತಿ ಆಚರಿಸಿದರು.
![ಬೀದರ್ನಲ್ಲಿ ಸರಳ ಬಸವ ಜಯಂತಿ ಆಚರಣೆ basava-jayanti-celebration-in-bidar](https://etvbharatimages.akamaized.net/etvbharat/prod-images/768-512-6948419-thumbnail-3x2-bdr.jpg)
ಬಸವೇಶ್ವರರ ಜಯಂತಿ
ನಗರದ ಬಸವೇಶ್ವರ ವೃತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ, ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಬಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ಸಂಭ್ರಮಗಳಿಗೆ ಅವಕಾಶವಿಲ್ಲದಿದ್ದರೂ ಮಹಾತ್ಮರ ಜಯಂತಿ ಆಚರಣೆ ಮಾಡುವುದು ಕರ್ತವ್ಯವಾಗಿದೆ. ಹೀಗಾಗಿ ಸಾಮಾಜಿಕ ನ್ಯಾಯ, ಮಾನವೀಯ ಮೌಲ್ಯಗಳು ಎತ್ತಿ ಹಿಡಿದ ಬಸವಣ್ಣನವರ ಜೀವನ ನಮ್ಮ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಬೀದರ್ನಲ್ಲಿ ಸರಳ ಬಸವೇಶ್ವರ ಜಯಂತಿ ಆಚರಣೆ
ಶಾಸಕ ಬಂಡೆಪ್ಪ ಕಾಶೆಂಪೂರ್, ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹದೇವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್. ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಚಿದ್ರಿ ಉಪಸ್ಥಿತರಿದ್ದರು.