ಕರ್ನಾಟಕ

karnataka

ETV Bharat / state

ಘಮಸುಬಾಯಿ ಬೋಂತಿ ತಾಂಡಾದಲ್ಲಿ ಬಂಜಾರಾ ಶ್ರೀಗಳ ಸಮಾಧಿ ನಿರ್ಮಾಣ - ಧರ್ಮಗುರು ಸಂತ ಶ್ರೀರಾಮರಾವ್ ಮಹಾರಾಜರ ಅಸ್ತಿ ಪೂಜೆ

ಮಹಾರಾಷ್ಟ್ರದ ಪೌರಾದೇವಿಯಲ್ಲಿ ನಿಧನರಾದ ಬಂಜಾರಾ ಸಮುದಾಯದ ಧರ್ಮಗುರು ಸಂತ ಶ್ರೀರಾಮರಾವ್ ಮಹಾರಾಜರ ಅಸ್ತಿ ಪೂಜೆ ಮಾಡಿ ಸಮಾಧಿ ನಿರ್ಮಾಣ ಕಾರ್ಯಕ್ಕೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಚಾಲನೆ ನೀಡಿದರು.

thanda
ನಿರ್ಮಾಣ

By

Published : Nov 11, 2020, 9:00 PM IST

ಬೀದರ್ :ಮಹಾರಾಷ್ಟ್ರದ ಪೌರಾದೇವಿಯಲ್ಲಿ ನಿಧನರಾದ ಬಂಜಾರಾ ಸಮುದಾಯದ ಧರ್ಮಗುರು ಸಂತ ಶ್ರೀರಾಮರಾವ್ ಮಹಾರಾಜರ ಅಸ್ತಿ ಪೂಜೆ ಮಾಡಿ ಸಮಾಧಿ ನಿರ್ಮಾಣ ಕಾರ್ಯಕ್ಕೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಚಾಲನೆ ನೀಡಿದರು.

ಜಿಲ್ಲೆಯ ಔರಾದ್ ತಾಲೂಕಿನ ಘಮಸುಬಾಯಿ ಬೋಂತಿ ತಾಂಡಾದಲ್ಲಿ ನಿಧನರಾದ ರಾಮರಾವ್ ಮಹಾರಾಜರ ಅಸ್ತಿ ಪೂಜೆ ಮಾಡಲಾಯಿತು. ನಂತರ ಗೋವುಗಳ ಪೂಜೆ ಮಾಡಿ ಸಸಿ ನೆಟ್ಟು, ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಸಮಾಧಿ ನಿರ್ಮಾಣ ಕಾರ್ಯಕ್ಕೆ ಸಚಿವ ಪ್ರಭು ಚವ್ಹಾಣ ಚಾಲನೆ ನೀಡಿದರು.

ಬೋಂತಿ ತಾಂಡಾದಲ್ಲಿ ಬಂಜಾರಾ ಶ್ರೀಗಳ ಸಮಾಧಿ ನಿರ್ಮಾಣಕ್ಕೆ ಚಾಲನೆ
ಸಾವಿರಾರು ಜನ ಬಂಜಾರ ಸಮುದಾಯದವರು ಸೇರಿದಂತೆ ಕಳಸ ಹೊತ್ತ ನಾರಿಯರ ಮೆರವಣಿಗೆ ಮೂಲಕ ಅಸ್ತಿಯನ್ನು ತಂದು ಹೋಮ, ಪೂಜೆ ನಡೆಸಲಾಯಿತು. ಕೊರೊನಾ ಸಂದರ್ಭದಲ್ಲಿ ದೂರದ ಪೌರಾದೇವಿಯಲ್ಲಿ ಅಂತಿಮ ದರ್ಶನ ಪಡೆಯಲಾಗದ ಜನರಿಗೆ ಶ್ರೀಗಳ ಅಸ್ತಿಯ ಅಂತಿಮ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿತ್ತು.

ABOUT THE AUTHOR

...view details