ಬೀದರ್ನಲ್ಲಿ ಅಯ್ಯಪ್ಪ ಸ್ವಾಮಿ ಮಹಾ ಪಡಿಪೂಜೆ ಅದ್ದೂರಿ ಬೀದರ್:ಅಯ್ಯಪ್ಪ ಸ್ವಾಮಿ 18ನೇ ವರ್ಷದ ಮಹಾ ಪಡಿಪೂಜೆ ಹಾಗೂ ಗುರುಸ್ವಾಮೀಜಿಗಳ ಗುರುವಂದನೆ ಕಾರ್ಯಕ್ರಮ ಬೀದರನಲ್ಲಿ ಅದ್ಧೂರಿಯಿಂದ ಜರುಗಿತು.
ನಗರದ ಕೆಇಬಿಯ ಶರಣನಗರದಲ್ಲಿ ಗುರುಸ್ವಾಮಿಗಳಾದ ಶಿವಕಾಂತ ಮೂಲಗೆ ಆಯೋಜಿಸಿದ ಮಹಾ ಪಡಿಪೂಜೆಯಲ್ಲಿ ನೆರೆಯ ತೆಲಂಗಣಾ ಮತ್ತು ಮಹಾರಾಷ್ಟ್ರ ಹಾಗೂ ಬೆಂಗಳೂರು, ಬೀದರ್ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ನೂರಾರು ಜನ ಹಿರಿಯ ಸ್ವಾಮೀಜಿಗಳು ಭಾಗಿಯಾದರು. ಭಕ್ತರು ಕೂಡ ಶ್ರದ್ಧಾ ಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಂಡು ಗುರು ಸ್ವಾಮೀಜಿಗಳ ದರ್ಶನ ಪಡೆದು ಪುನೀತರಾದರು.
ಮಾಲಾಧಾರಿಗಳು 41ದಿನಗಳ ಕಠಿಣ ವ್ರತ ಮಾಡುವುದರಿಂದ ನಮ್ಮೊಳಗಿನ ಸದ್ಗುಣಗಳು ಬೆಳೆದು ಉತ್ತಮ ಮಾನವರಾಗುವ ಅವಕಾಶ ದೊರೆಯುತ್ತವೆ ಎಂದ ಗುರುಸ್ವಾಮಿಗಳು ವಿವರಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್ ಠಾಕೂರ್, ಬಿಡಿಎ ಅಧ್ಯಕ್ಷ ಬಾಬು ವಾಲಿ, ಪ್ರಸನ್ನ ಖಂಡ್ರೆ ಸೇರಿದಂತೆ ಹಲವು ಗಣ್ಯರು ಪೂಜೆಯಲ್ಲಿ ಪಾಲ್ಗೊಂಡು ಸ್ವಾಮಿಗಳ ದರ್ಶನ ಪಡೆದರು.
ಇದನ್ನೂ ಓದಿ:ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ: ಚುನಾವಣಾ ರಣಕಹಳೆಗೆ ಸಿದ್ಧತೆ