ಬಸವಕಲ್ಯಾಣ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಹಿನ್ನೆಲೆಯಲ್ಲಿ, ಬಾಬರಿ ಮಸೀದಿ ಕ್ರಿಯಾ ಸಮಿತಿಯಿಂದ ನಗರದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸುವ ಮೂಲಕ ಕರಾಳ ದಿನ ಆಚರಿಸಲಾಯಿತು.
ಅಯೋಧ್ಯೆ ತೀರ್ಪು: ಸುಪ್ರೀಂಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮನವಿ
ಬಾಬರಿ ಮಸೀದಿ ಧ್ವಂಸ ಹಿನ್ನೆಲೆಯಲ್ಲಿ ಬಾಬರಿ ಮಸೀದಿ ಕ್ರಿಯಾ ಸಮಿತಿಯಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಬಸವಕಲ್ಯಾಣಲ್ಲಿ ಕರಾಳ ದಿನ ಆಚರಣೆ ನಡೆಯಿತು.
ಸಮಿತಿ ಪ್ರಮುಖ ಸದಸ್ಯರ ನಿಯೋಗದಿಂದ ಹಳೆ ತಹಶೀಲ್ ಕಚೇರಿ ಆವರಣದಲ್ಲಿ ಕೆಲ ಕಾಲ ಕೈಗೆ ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಿಸಲಾಯಿತು. ಈ ವೇಳೆ ಅಯೋಧ್ಯೆ ತೀರ್ಪು ಸಂಬಂಧ ಸುಪ್ರೀಂಗೆ ಮೇಲ್ಮನವಿ ಅರ್ಜಿ ಸಲ್ಲಿಕೆ ಸಂಬಂಧ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಉಪ ತಹಸೀಲ್ದಾರ ರಾಜಕುಮಾರ ಮರ್ತುರಕರ್ ಅವರಿಗೆ ಸಲ್ಲಿಸಲಾಯಿತು.
ಕ್ರೀಯಾ ಸಮಿತಿ ಮುಖಂಡ ಇಕ್ರಾಮೋದ್ದಿನ್ ಖಾದಿವಾಲೆ ಮಾತನಾಡಿ, ಅಯೋಧ್ಯೆ ತೀರ್ಪು ಮುಸ್ಲಿಂ ಸಮುದಾಯದಲ್ಲಿ ನೋವು ಉಂಟು ಮಾಡಿದೆ. ಸುಪ್ರೀಂಕೋರ್ಟ್ ಕಳೆದ ತಿಂಗಳ 9ನೇ ತಾರೀಖಿನಂದು ನೀಡಿರುವ ತೀರ್ಪು ಪ್ರಶ್ನಿಸಿ ಜಾಮಾತ್ ಉಲೇಮಾ-ಎ-ಹಿಂದ್ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿ ಬೆಂಬಲಿಸಿ ಮನವಿ ಪತ್ರ ನೀಡಲಾಗುತ್ತಿದೆ ಎಂದರು.
TAGGED:
ಬಾಬ್ರಿ ಮಸೀದಿ ಕಟ್ಟಡ ಧ್ವಂಸ