ಕರ್ನಾಟಕ

karnataka

ETV Bharat / state

ಆಟೋ ಪಲ್ಟಿ: ವೃದ್ಧ ಸಾವು, ಇಬ್ಬರಿಗೆ ಗಂಭೀರ ಗಾಯ.. - auto tumble basavakalyana

ಬಸವಕಲ್ಯಾಣದಲ್ಲಿ ಸಂತೆ ಮುಗಿಸಿಕೊಂಡು ತೆರಳುವಾಗ ಆಟೋ ಪಲ್ಟಿ ಹೊಡೆದು ವೃದ್ಧ ಮೃತಪಟ್ಟಿದ್ದಾನೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.

basavakalyana
ಆಟೋ ಪಲ್ಟಿ

By

Published : Mar 14, 2020, 10:14 AM IST

ಬಸವಕಲ್ಯಾಣ: ಆಟೋ ಪಲ್ಟಿಯಾಗಿ ಓರ್ವ ವೃದ್ಧ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ಇಸ್ಲಾಂಪುರ ಗ್ರಾಮದ ಸಮೀಪ ನಡೆದಿದೆ.

ಇಸ್ಲಾಂಪುರ ಗ್ರಾಮದ ಕಲ್ಯಾಣಿ ಚನ್ನಪ್ಪ ಅಮಂಗೆ (15) ಮೃತ ವೃದ್ದನಾಗಿದ್ದಾನೆ. ರಾಜೇಶ್ವರದಲ್ಲಿ ನಡೆದ ವಾರದ ಸಂತೆ ಮುಗಿಸಿಕೊಂಡು ಮರಳಿ ಗ್ರಾಮಕ್ಕೆ ತೆರಳುವಾಗ ಆಟೋ ಚಕ್ರದ ಎಕ್ಸಲ್ ಮುರಿದು ಘಟನೆ ಸಂಭವಿಸಿದೆ. ಓರ್ವ ಬಾಲಕ ಹಾಗೂ ಬಾಲಕಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೀದರ್​ನ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದಕ್ಕೆ ಸಂಬಂಧ ಪಟ್ಟಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ವಸಿಮ್ ಪಟೇಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details