ಬಸವಕಲ್ಯಾಣ: ಆಟೋ ಪಲ್ಟಿಯಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟು, ಇಬ್ಬರಿಗೆ ಗಾಯವಾದ ಘಟನೆ ತಾಲೂಕಿನ ಸಸ್ತಾಪೂರ ಬಳಿ ನಡೆದಿದೆ.
ಆಟೋ ಪಲ್ಟಿಯಾಗಿ ವಿದ್ಯಾರ್ಥಿ ಸಾವು.. ಇಬ್ಬರಿಗೆ ಗಾಯ - ಆಟೋದಲ್ಲಿ ಪ್ರಯಾಣಿಸುವ ವೇಳೆ, ಆಟೋ ಪಲ್ಟಿ
ಬಸವಕಲ್ಯಾಣದಲ್ಲಿ ಪರೀಕ್ಷೆಗೆ ಹಾಜರಾಗಲೆಂದು ತೆರಳಿದ್ದ ವಿದ್ಯಾರ್ಥಿಯೊಬ್ಬ ಆಟೋದಲ್ಲಿ ಪ್ರಯಾಣಿಸುವ ವೇಳೆ, ಆಟೋ ಪಲ್ಟಿಯಾಗಿ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ವಿದ್ಯಾರ್ಥಿ ಸಾವು
ಮಿರ್ಜಾಪೂರ ಗ್ರಾಮದ ಜ್ಞಾನೇಶ್ವರ ವೆಂಕಟ ಮಂಠಾಳೆ(20)ಮೃತ ಯುವಕ. ಬಿ.ಕಾಂ ಓದುತ್ತಿದ್ದ ಈತ ಪರೀಕ್ಷೆಗೆ ಹಾಜರಾಗಲೆಂದು, ಬಸವಕಲ್ಯಾಣಕ್ಕೆ ಬರುತ್ತಿದ್ದ ವೇಳೆ ಮಾರ್ಗ ಮಧ್ಯೆ ಚಾಲಕನ ನಿಯಂತ್ರ ತಪ್ಪಿ ಅಪೆ ಆಟೋ ಪಲ್ಟಿಯಾಗಿ, ಜ್ಞಾನೇಶ್ವರ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಇನ್ನು ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ, ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.