ಬೀದರ್:ಕೊರೊನಾ ಹರಡುವಿಕೆ ಬಗ್ಗೆ ಮುಂಜಾಗ್ರತಾ ಕ್ರಮಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಬೈಕ್ನಲ್ಲಿ ಬಂದ ಕಿಡಿಗೇಡಿಗಳಿಬ್ಬರು ಹಲ್ಲೆ ಮಾಡಿ ಪರಾರಿಯಾದ ಪ್ರಕರಣ ನಡೆದಿದೆ.
ಕರ್ತವ್ಯ ನಿರ್ವಹಿಸಿ ಮನೆಗೆ ಮರಳುತ್ತಿದ್ದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ.. ದೂರು ದಾಖಲು - ಬೀದರ್ ಸುದ್ದಿ
ಬುಧವಾರ ಮಧ್ಯಾಹ್ನ 3.20ರ ಸುಮಾರಿಗೆ ಕೋವಿಡ್-19 ಸಮೀಕ್ಷೆಯ ಕಾರ್ಯ ನಿರ್ವಹಿಸಿ,ತನ್ನ ಸಹದ್ಯೋಗಿಯೊಬ್ಬರ ಜತೆಗೆ ನಡೆದುಕೊಂಡು ಮನೆಗೆ ಬರುತ್ತಿರುವಾಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಬಸವೇಶ್ವರ ದೇವಸ್ಥಾನ ಕ್ರಾಸ್ ಬಳಿ ದ್ವಿಚಕ್ರ ವಾಹನದ ಮೇಲೆ ಬಂದ ಇಬ್ಬರು, ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಸವಕಲ್ಯಾಣದ ಹೊಸಪೇಟ್‌ಗಲ್ಲಿ ನಿವಾಸಿ ಆಶಾ ಕಾರ್ಯಕರ್ತೆ ಗೀತಾ ಸುನೀಲ್ ಬುಯೆ ಹಲ್ಲೆಗೊಳಗಾದವರು. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯರ್ತೆಯಾಗಿರುವ ಇವರು, ವಾರ್ಡ್ ಸಂಖ್ಯೆ 14ರ ಕೈಕಾಡಿ ಗಲ್ಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬುಧವಾರ ಮಧ್ಯಾಹ್ನ 3.20ರ ಸುಮಾರಿಗೆ ಕೋವಿಡ್-19 ಸಮೀಕ್ಷೆಯ ಕಾರ್ಯ ನಿರ್ವಹಿಸಿ,ತನ್ನ ಸಹದ್ಯೋಗಿಯೊಬ್ಬರ ಜತೆಗೆ ನಡೆದುಕೊಂಡು ಮನೆಗೆ ಬರುತ್ತಿರುವಾಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಬಸವೇಶ್ವರ ದೇವಸ್ಥಾನ ಕ್ರಾಸ್ ಬಳಿ ದ್ವಿಚಕ್ರ ವಾಹನದ ಮೇಲೆ ಬಂದ ಇಬ್ಬರು, ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.