ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ಮತ್ತೊಂದು ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ - ಬೀದರ್ ನಲ್ಲಿ ಮತ್ತೊಂದು ಪಾಜಿಟಿವ್

ರಾಜ್ಯದ ತುತ್ತತುದಿಯಲ್ಲಿರುವ ಜಿಲ್ಲೆ ಬೀದರ್‌ನಲ್ಲಿ ಸೋಂಕಿತರ ಸಂಖ್ಯೆ 11ಕ್ಕೇರಿದೆ‌. ಒಂದೇ ದಿನದಲ್ಲಿ 91 ಜನರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

Covid-19 positive case
ಬೀದರ್​ನಲ್ಲಿ ಮತ್ತೊಂದು ಕೋವಿಡ್-19 ಪಾಜಿಟಿವ್ ಪ್ರಕರಣ ಪತ್ತೆ

By

Published : Apr 11, 2020, 4:18 PM IST

ಬೀದರ್: ಕಳೆದ ವಾರ ದೆಹಲಿಯ ಜಮಾತ್​ಗೆ ಹೋಗಿ ಬಂದ 10 ಜನರಲ್ಲಿ ಕೋವಿಡ್ -19 ಸೋಂಕು ಪತ್ತೆಯಾದ ಬೆನ್ನಲ್ಲೆ ಕೇಸ್ ನಂಬರ್ 122 ರ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಹಿಳೆಯ ವರದಿಯಲ್ಲಿ ಖಾಯಿಲೆ ಲಕ್ಷಣಗಳು ಗೋಚರಿಸಿವೆ.

ಹಳೆಯ ಸಿಟಿಯ ಕೊರೊನಾ ಸೋಂಕು ಪೀಡಿತ ಕೇಸ್ ನಂಬರ್ 122 ರ ಅಣ್ಣನ ಹೆಂಡತಿ, ಸುಮಾರು 50 ವಯಸ್ಸಿನ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಈ ಹಿನ್ನಲೆಯಲ್ಲಿ ಈಗ ಗಡಿ ಜಿಲ್ಲೆ ಬೀದರ್​ನಲ್ಲಿ ಸೋಂಕಿತರ ಸಂಖ್ಯೆ 11 ಕ್ಕೇರಿದೆ‌. ಒಂದೇ ದಿನದಲ್ಲಿ 91 ಜನರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಅದಕ್ಕೂ ಮೊದಲೇ ಮಹಿಳೆಯಲ್ಲಿ ಪಾಸಿಟಿವ್ ಪತ್ತೆಯಾಗಿರುವುದು ಕೊರೊನಾ ವೈರಸ್ ಭೀತಿ ಹೆಚ್ಚಿಸುವಂತೆ ಮಾಡಿದೆ.

ABOUT THE AUTHOR

...view details