ಬೀದರ್:ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ್ದ 11 ಜನರಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 381ಕ್ಕೆ ಏರಿಕೆಯಾಗಿದೆ.
'ಮಹಾ ಕಂಟಕ'..ಬೀದರ್ನಲ್ಲಿ ಮತ್ತೆ 11 ಜನರಿಗೆ ಕೊರೊನಾ ಪಾಸಿಟಿವ್ - bidar corona pandemic
ಮಹಾರಾಷ್ಟ್ರದಿಂದ ಬೀದರ್ ಜಿಲ್ಲೆಗೆ ಮರಳಿದ್ದ 11 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 6 ಜನ ಸೋಂಕಿಗೆ ಬಲಿಯಾಗಿದ್ದಾರೆ.
'ಮಹಾ ಕಂಟಕ'..ಬೀದರ್ನಲ್ಲಿ ಮತ್ತೆ 11 ಜನರಿಗೆ ಕೊರೊನಾ ಪಾಸಿಟಿವ್
ಜಿಲ್ಲೆಯ ಕಮಲನಗರ-2, ಠಾಣಾಕುಶನೂರ್-3, ಔರಾದ್ ತಾಲೂಕಿನ ಜಮಾಲಪೂರ್-1, ಬಸವಕಲ್ಯಾಣ ತಾಲೂಕಿನ ಉಮಾಪೂರ್-3 ಹಾಗೂ ಹೊನ್ನಳ್ಳಿ ಗ್ರಾಮದಲ್ಲಿ 2 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 381 ಕ್ಕೆ ಏರಿಕೆಯಾಗಿದೆ.
ಇಂದು 36 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 265 ಜನರು ಗುಣಮುಖರಾಗಿದ್ದು, 6 ಜನ ಸೋಂಕಿಗೆ ಬಲಿಯಾಗಿದ್ದಾರೆ.