ಕರ್ನಾಟಕ

karnataka

ETV Bharat / state

ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಎಂಐಎಂಗಳಿಂದ ಮೈತ್ರಿ: ಸಂಸದ ಖೂಬಾ ಲೇವಡಿ - ಕಾಂಗ್ರೆಸ್, ಜೆಡಿಎಸ್,ಎಂಐಎಗಳಿಂದ ಮೈತ್ರಿ

ಪರಸ್ಪರ ವಿರೋಧಿಸಿಕೊಂಡು ಚುನಾವಣೆ ಎದುರಿಸಿಕೊಂಡವರು ಇಂದು ನಗರದ ಅಭಿವೃದ್ಧಿ ಯಾವ ರೀತಿ ಮಾಡಲಿದ್ದಾರೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು..

MP Bhagwant Khooba
ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್,ಎಂಐಎಗಳಿಂದ ಮೈತ್ರಿ: ಸಂಸದ ಖೂಬಾ..

By

Published : Nov 1, 2020, 12:42 PM IST

Updated : Nov 1, 2020, 3:07 PM IST

ಬಸವಕಲ್ಯಾಣ :ನಗರಸಭೆ ಚುನಾವಣೆಯಲ್ಲಿ ಪರಸ್ಪರ ನಿಂದನೆ, ಹೊಡೆದಾಟ ನಡೆಸಿದ ಕಾಂಗ್ರೆಸ್, ಜೆಡಿಎಸ್ ಹಾಗೂ ಎಂಐಎಂ ಪಕ್ಷಗಳು ಅಧಿಕಾರಕ್ಕಾಗಿ ಇಂದು ದೋಸ್ತಿಗಳಾಗಿವೆ ಎಂದು ಸಂಸದ ಭಗವಂತ ಖೂಬಾ ಲೇವಡಿ ಮಾಡಿದರು.

ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್,ಎಂಐಎಂಗಳಿಂದ ಮೈತ್ರಿ: ಸಂಸದ ಖೂಬಾ..

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರಸಭೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ಕೂಡ ನಾನು ಈ ಮೂರು ಪಕ್ಷಗಳ ಕಳ್ಳಾಟ ನೋಡಲೆಂದು ಇಲ್ಲಿಗೆ ಆಗಮಿಸಿದ್ದೇನೆ. ಹಿಂದೆ ನಡೆದ ನಗರಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಎಂಐಎ ಪಕ್ಷಗಳು ಪರಸ್ಪರ ಬೈದಾಡಿಕೊಳ್ಳುವ ಜೊತೆಗೆ ಹೊಡೆದಾಡಿಕೊಂಡಿದ್ದವು.

ಆದರೆ, ಇಂದು ಅಧಿಕಾರದ ಆಸೆಗಾಗಿ ಹಿಂದೆ ನಡೆದ ಘಟನೆಗಳು ಮತ್ತು ಪಕ್ಷಗಳ ಸಿದ್ಧಾಂತವನ್ನು ಬದಿಗೊತ್ತಿ ದೋಸ್ತಿ ಮಾಡಿಕೊಂಡಿವೆ. ಮುಂಬರುವ ಬಸವಕಲ್ಯಾಣ ಕ್ಷೇತ್ರದ ವಿಧಾನಸಭೆ ಉಪಚುನಾವಣೆಯಲ್ಲಿಯೂ ಇವರ ದೋಸ್ತಿ ಮುಂದುವರೆಯಲಿದೆ ಎಂದು ಹೇಳಿದರು.

ಪರಸ್ಪರ ವಿರೋಧಿಸಿಕೊಂಡು ಚುನಾವಣೆ ಎದುರಿಸಿಕೊಂಡವರು ಇಂದು ನಗರದ ಅಭಿವೃದ್ಧಿ ಯಾವ ರೀತಿ ಮಾಡಲಿದ್ದಾರೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಬರುವ ಉಪ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷ ವಿರೋಧಿಗಳ ಮೇಲೆ ಕ್ರಮ :ಪಕ್ಷದಲ್ಲಿಯೇ ಇದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು, ಪಕ್ಷದ ಮುಖಂಡರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ಇದೇ ವೇಳೆ ಎಚ್ಚರಿಸಿದರು.

ಬಿಜೆಪಿ ಪಕ್ಷದಲ್ಲಿ ಆಂತರಿಕ ಸ್ವಾತಂತ್ರ್ಯವಿದೆ, ಪರಸ್ಪರ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ಮುಖಂಡರು ಮತ್ತು ಕಾರ್ಯಕರ್ತರಿಗೂ ಇದೆ. ಆದರೆ, ಇದನ್ನು ದುರುಪಯೋಗ ಪಡಿಸಿಕೊಂಡು ಪಕ್ಷದ ಹೆಸರಿಗೆ ಧಕ್ಕೆ ತರುವ ಕೆಲಸ ಮಾಡಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Last Updated : Nov 1, 2020, 3:07 PM IST

ABOUT THE AUTHOR

...view details