ಕರ್ನಾಟಕ

karnataka

ETV Bharat / state

ನೀತಿ ಸಂಹಿತೆ ಜಾರಿಯಲ್ಲಿದ್ರೂ ಗರಿ ಗರಿ ನೋಟು ಕೊಟ್ಟು ಎಡವಿದ್ರಾ ಸಂಸದ ಖೂಬಾ?! - ಆರೋಪ

ಖುಷಾಲಿ ಹೆಸರಿನಲ್ಲಿ ಬಂಜಾರ ಸಮುದಾಯದವರಿಗೆ ಸಂಸದ ಭಗವಂತ ಖೂಬಾ ಗರಿ ಗರಿ ನೋಟು ಕೊಟ್ಟಿರುವ ಆರೋಪ ಕೇಳಿ ಬಂದಿದೆ.

ಸಂಸದ ಖೂಬಾ

By

Published : Mar 21, 2019, 11:30 PM IST

ಬೀದರ್: ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಸಂಸದ ಭಗವಂತ ಖೂಬಾ ಅವರು ಹೋಳಿ ಹಬ್ಬದ ನಿಮಿತ್ತ ಮನೆಗೆ ಬಂದವರಿಗೆ 'ಖುಷಾಲಿ' ಹೆಸರಿನಲ್ಲಿ ಗರಿ ಗರಿ ನೋಟು ಕೊಟ್ಟಿರುವ ಆರೋಪ ಕೇಳಿ ಬಂದಿದೆ.

ಸಂಸದರ ಶಿವನಗರದ ನಿವಾಸಕ್ಕೆ ಬಂಜಾರ ಸಮುದಾಯದ ಮಹಿಳೆಯರು, ಪುರುಷರು ಹೋಳಿ ಹಬ್ಬದ ಶುಭ ಕೋರಲು ಬಂದಿದ್ದರು. ಈ ವೇಳೆಯಲ್ಲಿ ಖುಷಾಲಿ ಕೊಡುವ ಪ್ರತೀತಿ ಇದೆ. ಆದ್ರೆ ಸದ್ಯ ನೀತಿ ಸಂಹಿತೆ ಜಾರಿ ಇರೋದ್ರಿಂದ ದುಡ್ಡು ಕೊಡುವಂತಿಲ್ಲ ಎಂಬುದನ್ನು ಮರೆತು ಸಂಸದ ಭಗವಂತ ಖೂಬಾ ತಲಾ 200 ರೂ. ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ABOUT THE AUTHOR

...view details