ಕರ್ನಾಟಕ

karnataka

ETV Bharat / state

ಅಗ್ನಿಪಥ್​ ರ‍್ಯಾಲಿ ಇಂದಿನಿಂದ ಆರಂಭ: 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಂದ ನೋಂದಣಿ

ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ್​​ ರ‍್ಯಾಲಿ ಡಿಸೆಂಬರ್‌ 5 ರಿಂದ 22ರವರೆಗೆ ಬೀದರ್‌ನ ನೆಹರು ಮೈದಾನದಲ್ಲಿ ನಡೆಯಲಿದೆ.

Agnipath recruitment rally
ಅಗ್ನಿಪಥ್​ ರ‍್ಯಾಲಿ ಇಂದಿನಿಂದ ಆರಂಭ

By

Published : Dec 5, 2022, 12:16 PM IST

ಬೀದರ್:ಅಗ್ನಿಪಥ್​ ಸೇನಾ ನೇಮಕಾತಿ ರ‍್ಯಾಲಿ ಡಿಸೆಂಬರ್‌ 5 ರಿಂದ 22ರವರೆಗೆ ಬೀದರ್‌ನ ನೆಹರು ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಅಗ್ನಿಪಥ್​ ಸೇನಾ ನೇಮಕಾತಿ ರ‍್ಯಾಲಿ ಆರಂಭ

ಇಂದಿನಿಂದ ನೇಮಕಾತಿ ರ‍್ಯಾಲಿ ಆರಂಭವಾಗಿದ್ದು, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು,ಕೊಪ್ಪಳ, ಬಳ್ಳಾರಿ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 70ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನಿತ್ಯ 2,500 ವಿದ್ಯಾರ್ಥಿಗಳಿಂದ ಸೇನಾ ಭರ್ತಿ ರ‍್ಯಾಲಿ ನಡೆಯಲಿದೆ.

ಸಾಮಾನ್ಯ ಕೆಡರ್, ಟೆಕ್ನಿಕಲ್, ಕ್ಲರ್ಕ್, ಹೌಸ್ ಕಿಪರ್, ಬಾರ್ಬರ್, ಕುಕ್ ಸೈನಿಕ ಹುದ್ದೆಗಳ ನೇಮಕಾತಿಗಾಗಿ ಈ ರ‍್ಯಾಲಿ ನಡೆಯಲಿದೆ. ಅಗ್ನಿಪಥ್ ಯೋಜನೆಯಡಿ ನಡೆಯುತ್ತಿರುವ ಮೊದಲ ರ‍್ಯಾಲಿ ಇದಾಗಿದೆ. ಸಾಮಾನ್ಯ ಕೆಡರ್​ಗೆ 63,825 ಮತ್ತು ಇತರೆ ಕೆಡರ್‌ಗೆ 6550 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಅಗ್ನಿಪಥ್​ಗೆ ಹಳ್ಳಿಮಕ್ಕಳನ್ನು ಕಳಿಸಲು ಪಣ.. ಮಾಜಿ ಸೈನಿಕನಿಂದ ಉಚಿತ ತರಬೇತಿ ಶಿಬಿರ ಆರಂಭ

ABOUT THE AUTHOR

...view details