ಕರ್ನಾಟಕ

karnataka

ETV Bharat / state

ಬೀದರ್ - ಬೆಂಗಳೂರು ಹೆಚ್ಚುವರಿ ವಿಮಾನ ಸಂಚಾರಕ್ಕೆ ಗ್ರೀನ್ ಸಿಗ್ನಲ್ - Etv Bharat Kannada

ಮಾರ್ಚ್​ ತಿಂಗಳಲ್ಲಿ ಬೀದರ್​​ ನಿಂದ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಸಂಚಾರಕ್ಕೆ ಸ್ಟಾರ್‌ ಏರ್‌ನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಭೂಪಣ್ಣ ಅವರು ಒಪ್ಪಿಗೆ ಸೂಚಿಸಿದ್ದಾರೆ.

additional-flight-between-bidar-and-bengaluru
ಬೀದರ್ ಬೆಂಗಳೂರು ಮಧ್ಯೆ ಹೆಚ್ಚುವರಿ ವಿಮಾನ

By

Published : Dec 20, 2022, 12:31 PM IST

ಬೀದರ್‌: ಬೀದರ್‌ನಿಂದ ಬೆಂಗಳೂರಿಗೆ ವಿಮಾನ ಸಂಚಾರ ಸೇವೆ ವಿಸ್ತರಿಸುವ ಸಂಬಂಧ ಸ್ಟಾರ್ ಏರ್‌ ಉನ್ನತ ಅಧಿಕಾರಿಗಳು ನಗರದಲ್ಲಿ ಸೋಮವಾರ ಸಭೆ ನಡೆಸಿದರು. ಮಾರ್ಚ್ ವೇಳೆಗೆ ಬೀದರ್‌ನಿಂದ ಬೆಂಗಳೂರಿಗೆ ಬೆಳಿಗ್ಗೆ ವಿಮಾನ ಸಂಚಾರ ಆರಂಭಿಸಲು ಸಭೆಯಲ್ಲಿ ಸ್ಟಾರ್‌ ಏರ್‌ನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಭೂಪಣ್ಣ ಅವರು ಒಪ್ಪಿಗೆ ಸೂಚಿಸಿದರು.

76 ಆಸನಗಳ ಎರಡು ಹೊಸ ವಿಮಾನ ಸಂಚಾರ ಆರಂಭಿಸುವ ದಿಸೆಯಲ್ಲಿ ಪ್ರಯತ್ನಗಳು ನಡೆದಿವೆ ಎಂದು ಭೂಪಣ್ಣ ಹೇಳಿದರು. ಈ ಸಂದರ್ಭದಲ್ಲಿ ಬೀದರ್ ವಿಮಾನ ನಿಲ್ದಾಣದ ನಿರ್ದೇಶಕ ಅಮಿತ್​ ಕುಮಾರ್​ ಮಿಶ್ರಾ ಇದ್ದರು. ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಬೀದರ್-ಬೆಳಗಾವಿ-ಮೋಪಾ (ಗೋವಾ) ಮಧ್ಯೆ ವಿಮಾನ ಸಂಚಾರ ಆರಂಭಿಸುವಂತೆ ಜನರ ಬೇಡಿಕೆ ಇದೆ. ಮಾರ್ಗ ಪರಿಶೀಲನೆ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಚೇರಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ವಿಮಾನದಲ್ಲಿ ನಾಯಿಮರಿ ಪ್ರಯಾಣಕ್ಕೆ ಅವಕಾಶ ನೀಡದ ಪೈಲಟ್: ಪ್ರವಾಸವನ್ನೇ ರದ್ದು ಮಾಡಿದ ಕುಟುಂಬ

ABOUT THE AUTHOR

...view details