ಕರ್ನಾಟಕ

karnataka

ETV Bharat / state

ಆಸ್ಪತ್ರೆಯಲ್ಲಿ ಬೆಡ್​ಗಳಿಲ್ಲ ಎಂದು ವಿಡಿಯೋ ಮಾಡಿ ಹರಿಬಿಟ್ಟವರ ಮೇಲೆ ಕ್ರಮ: ಡಿ ಸಿ ರಾಮಚಂದ್ರನ್ - D C Ramachandran talk about fake video on govt hospital in bidar

ಬೀದರ್ ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಬೆಡ್​ ಸಿಗದೇ ಆಸ್ಪತ್ರೆಯ ಮುಂಭಾಗದ ಫುಟ್​ಪಾತ್ ಮೇಲೆ ಮಲಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

public
ಸಾರ್ವಜನಿಕರು

By

Published : Apr 21, 2021, 9:34 PM IST

ಬೀದರ್: ಬ್ರೀಮ್ಸ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಎದುರಾಗಿದ್ದು, ಆಸ್ಪತ್ರೆಯ ಮುಂಭಾಗದ ಫುಟ್​ಪಾತ್​ ಮೇಲೆ ಕೋವಿಡ್​ ಸೋಂಕಿತರು ಮಲಗಿದ್ದಾರೆ ಎಂಬ ಸುಳ್ಳು ವಿಡಿಯೋ ಮಾಡಿ ಹರಿಬಿಡುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದ್ದು, ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿತರು ಬೆಡ್ ಸಿಗದೇ ಆಸ್ಪತ್ರೆಯ ಮುಂಭಾಗದ ಫುಟ್​ಪಾತ್​ ಮೇಲೆ ಮಲಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಯಾರೋ ಕಿಡಿಗೇಡಿಗಳು ವಿಡಿಯೋ ವೈರಲ್ ಮಾಡಿದ್ದಾರೆ. ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಬಂಧಿಕರನ್ನ ಕೇಳಿದ್ರೆ, ನಾವು ಐದು ದಿನದಿಂದ ಇಲ್ಲಿ ಇದ್ದೀವಿ. ನಮ್ಮ ಪೇಷಂಟ್​ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಾತ್ರ ಪ್ರವೇಶ ಇದೆ. ಹೀಗಾಗಿ ಅವರ ಜೊತೆ ಬಂದ ನಾವು ಸುಸ್ತಾಗಿ ಇಲ್ಲಿ ನೆರಳಿನಲ್ಲಿ ಮಲಗುತ್ತಾ ಇದ್ದೇವೆ. ಯಾರು ಕೂಡ ಕೊರೊನಾ ಸೋಂಕಿತರು ಹೊರಗಡೆ ಮಲಗುತ್ತಿಲ್ಲ ಹಾಗೂ ಬೆಡ್ ಕೊರತೆಯೂ ಇಲ್ಲ ಎಂದು ರೋಗಿಯೊಬ್ಬರ ಸಂಬಂಧಿಕರು​​ ಸ್ಪಷ್ಟಪಡಿಸಿದ್ದಾರೆ.

ಬೆಡ್​​​​ ಸಿಗ್ತಿಲ್ಲ ಎಂಬ ವಿಡಿಯೋ ವೈರಲ್​ ಬಗ್ಗೆ ಡಿಸಿ ರಾಮಚಂದ್ರನ್ ಸ್ಪಷ್ಟನೆ

ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನ ಕೇಳಿದರೆ. ಬೆಡ್ ಕೊರತೆಯಿದೆ ಎಂಬುವುದು ಸುಳ್ಳು ಸುದ್ದಿ. ಆ ರೀತಿಯ ವಿಡಿಯೋ ಕ್ರಿಯೇಟ್ ಮಾಡಿ ಹರಿ ಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಎನ್​ಜಿಓ ಅಂತಾ ಹೇಳಿಕೊಂಡು‌ ಬಂದವರು ಈ ರೀತಿ ಮಾಡಿದ್ದಾರೆ. ಇಲ್ಲದ ಸುದ್ದಿಯನ್ನ ಕ್ರಿಯೇಟ್ ಮಾಡಿ ಸುಳ್ಳು ಹಬ್ಬಿಸುತ್ತಿದ್ದಾರೆ. ಯಾರಿಗೂ ಕೂಡಾ ಬೆಡ್​ನ ಸಮಸ್ಯೆಯಿಲ್ಲ. 450 ಬೆಡ್​ಗಳು ಹಳೆ ಆಸ್ಪತ್ರೆಯಲ್ಲಿ, 100 ಬೆಡ್ ಹೊಸ ಆಸ್ಪತ್ರೆಯಲ್ಲಿವೆ. ಇಷ್ಟಿದ್ದು ಕೂಡಾ ಸುಳ್ಳು ಪ್ರಚಾರ ಮಾಡಿಕೊಂಡು ತಿರುಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ಮೂಲಕ ಕಂಪ್ಲೀಟ್ ಮಾಹಿತಿ ತೆಗೆದುಕೊಂಡು, ಯಾಕೆ ಅವರು ಹೀಗೆ ಮಾಡಿದ್ದಾರೆ ಎಂಬುದನ್ನು ತಿಳಿದು ಅನಂತರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಮತ್ತು ಯಾವುದೇ ಸುದ್ದಿ ವೈರಲ್ ಮಾಡುವ ಮುನ್ನ ಅದರ ಸತ್ಯಾಸತ್ಯತೆ ಅರಿಯಿರಿ. ಸುಳ್ಳು ಸುದ್ದಿ ಹರಿಬಿಟ್ಟವರ ಮೇಲೆ ಡಿಸಾಸ್ಟರ್ ಮ್ಯಾನೇಜ್​ಮೆಂಟ್​ ಆ್ಯಕ್ಟ್ ಪ್ರಕಾರ ಕೇಸ್ ಹಾಗೂ ಡಿಸಾಸ್ಟರ್ ಸಮಯದಲ್ಲಿ ಸುಳ್ಳು ಹಬ್ಬುವವರ ಮೇಲೆ ಎಫ್ಐಆರ್ ದಾಖಲು ಮಾಡುತ್ತೇವೆ. ಈಗಾಗಲೇ ಪೊಲೀಸರಿಗೆ ಈ ಬಗ್ಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.

ಓದಿ:ರಾಜ್ಯದಲ್ಲಿ ಕೊರೊನಾ ಶಾಕ್..! 23,558 ಮಂದಿಗೆ ಪಾಸಿಟಿವ್ ದೃಢ; 116 ಸೋಂಕಿತರ ಸಾವು

ABOUT THE AUTHOR

...view details