ಕರ್ನಾಟಕ

karnataka

ETV Bharat / state

ಕಾಡು ಹಂದಿಗಳ ದಾಳಿಗೆ ಎಕರೆಯಷ್ಟು ಕಬ್ಬು ಮಣ್ಣುಪಾಲು, ಲಕ್ಷಾಂತರ ರೂಪಾಯಿ ನಷ್ಟ - Basavakalyana in Bidar district

ಕಬ್ಬಿನ ಗದ್ದೆಗೆ ಕಾಡುಹಂದಿಗಳು ನುಗ್ಗಿ ದಾಳಿ ಮಾಡಿದ್ದು, ಸುಮಾರು 1 ಎಕರೆಯಷ್ಟು ಕಬ್ಬು ನಷ್ಟವಾದ ಘಟನೆ ಬಸವಕಲ್ಯಾಣ ತಾಲ್ಲೂಕಿನ ತಳಬೋಗ ಗ್ರಾಮದಲ್ಲಿ ನಡೆದಿದೆ..

Acres of sugar cane loss due to wild pigs attack
ಕಾಡು ಹಮದಿಗಳ ದಾಳಿಗೆ ಎಕರೆಯಷ್ಟು ಕಬ್ಬು ಮಣ್ಣುಪಾಲು: ಲಕ್ವಾಂತರ ರೂಪಾಯಿ ನಷ್ಟ

By

Published : Jul 25, 2020, 3:33 PM IST

ಬಸವಕಲ್ಯಾಣ (ಬೀದರ್​) :ಬೆಳೆದು ನಿಂತ ಕಬ್ಬಿನ ಗದ್ದೆಗೆ ಕಾಡುಹಂದಿಗಳು ನುಗ್ಗಿ ದಾಳಿ ಮಾಡಿವೆ. ಸುಮಾರು 1 ಎಕರೆಯಷ್ಟು ಕಬ್ಬು ನಷ್ಟವಾದ ಘಟನೆ ತಾಲೂಕಿನ ತಳಬೋಗ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಶಿವಾಜಿ ಸೂರ್ಯವಂಶಿ ಅವರ ಜಮೀನಿನಲ್ಲಿ ದಾಳಿ ನಡೆಸಿದ ಕಾಡು ಹಂದಿಗಳು, ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬಿನ ಬೆಳೆ ನಷ್ಟ ಮಾಡಿವೆ.

ರಾತ್ರಿ ಸಮಯದಲ್ಲಿ ಗುಂಪು ಗುಂಪಾಗಿ ಹಠಾತ್ತನೆ ದಾಳಿ ನಡೆಸುವ ಈ ಕಾಡು ಹಂದಿಗಳು ಕಬ್ಬು ಸೇರಿ ಬಾಯಿಗೆ ಸಿಗುವ ಇತರೆ ಯಾವುದೇ ಬೆಳೆಗಳನ್ನು ಮನಬಂದಂತೆ ನಾಶ ಮಾಡುತ್ತಿವೆ.

ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಲಕ್ಷಾಂತರ ರೂಪಾಯಿ ಬೆಳೆ ಕಳೆದುಕೊಂಡ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ABOUT THE AUTHOR

...view details