ಬೀದರ್:ಕಂಟೇನರ್ ಲಾರಿಗೆ ಎರ್ಟಿಗಾ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಭಂಗೂರ ಬಳಿ ನಡೆದಿದೆ. ಘಟನೆಯಲ್ಲಿ ಹೈದರಾಬಾದ್ನ ಬೇಗಂಪೇಟ್ ಮೂಲದ ಪೊಲೀಸ್ ಕಾನ್ಸ್‌ಟೇಬಲ್ ಗಿರಿಧರ್ ಕುಟುಂಬದ ನಾಲ್ವರು ಮತ್ತು ಕಾರು ಚಾಲಕ ಸೇರಿ ಐವರು ಅಸುನೀಗಿದ್ದಾರೆ.
ಬೀದರ್ ರಸ್ತೆ ಅಪಘಾತದಲ್ಲಿ ಇಡೀ ಪೊಲೀಸ್ ಕಾನ್ಸ್‌ಟೇಬಲ್ ಕುಟುಂಬ ಬಲಿ, ಐವರು ಸಾವು - ಕಂಟೇನರ್ ಎರ್ಟಿಗಾ ಕಾರು ಡಿಕ್ಕಿ
ಅಪಘಾತಕ್ಕೀಡಾದ ಕಾರು ಹೈದರಾಬಾದ್ನಿಂದ ಕಲಬುರಗಿಯ ಗಾಣಗಾಪುರ ದೇವಸ್ಥಾನಕ್ಕೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ.
ಕಂಟೇನರ್ ಎರ್ಟಿಗಾ ಕಾರು ಡಿಕ್ಕಿ
ಪೊಲೀಸ್ ಕಾನ್ಸ್‌ಟೇಬಲ್ ಗಿರಿಧರ್ (45), ಪತ್ನಿ ಅನಿತಾ (36), ಮಗಳು ಪ್ರೀತಿ (14), ಮಗ ಮಯಂಕ್ (02) ಹಾಗೂ ಕಾರು ಚಾಲಕ ದಿನೇಶ್ (35) ಮೃತಪಟ್ಟವರೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದವರು ಹೈದರಾಬಾದ್ನಿಂದ ಕಲಬುರಗಿಯ ಗಾಣಗಾಪುರದ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸಾವರ್ಕರ್ ಫ್ಲೆಕ್ಸ್ ತೆರವಿನ ಬಳಿಕ ಶಿವಮೊಗ್ಗ ಉದ್ವಿಗ್ನ: ಯುವಕನಿಗೆ ಚಾಕು ಇರಿತ
Last Updated : Aug 15, 2022, 9:41 PM IST