ಕರ್ನಾಟಕ

karnataka

ETV Bharat / state

ಬಸವಕಲ್ಯಾಣ: ಹಾವು ಹಿಡಿದು ಚೆಲ್ಲಾಟವಾಡಲು ಹೋಗಿ! - ‘ಹಾವಿನೊಂದಿಗೆ ಚೆಲ್ಲಾಟವಾಡಿ ಪ್ರಾಣ ಕಳೆದುಕೊಂಡ ಯುವಕ

ಕೆರೆ ಬಳಿ ಕಾಣಿಸಿದ ಹಾವೊಂದನ್ನು ಕೈಯಿಂದ ಹಿಡಿದು ಹಾವಿನ ಜೊತೆಗೆ ಚೆಲ್ಲಾಟವಾಡಲು ಶುರುಮಾಡಿದ ಯುವಕನೋರ್ವನಿಗೆ ಹಾವು ಕಡಿದಿದ್ದು, ಆಸ್ಪತ್ರೆಗೆ ದಾಖಲಾಗೋ ಮುನ್ನವೇ ಆತನ ಪ್ರಾಣಪಕ್ಷಿ ಹಾರಿ ಹೋದ ಘಟನೆ ನಡೆದಿದೆ.

snake
snake

By

Published : Jun 12, 2021, 1:14 PM IST

ಬಸವಕಲ್ಯಾಣ(ಬೀದರ್):ಹಾವಿನೊಂದಿಗೆ ಚೆಲ್ಲಾಟವಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಬಸವಕಲ್ಯಾಣ ತಾಲೂಕಿನ ಶಿವಪುರ ಗ್ರಾಮದಲ್ಲಿ ಜರುಗಿದೆ. ಶಿವಪುರ ಗ್ರಾಮದ ಶಂಸೋದ್ದೀನ್ (24) ಮೃತ ಯುವಕ.

ಹಾವಿನೊಂದಿಗೆ ಚೆಲ್ಲಾಟವಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಗ್ರಾಮದ ಸಮೀಪದ ಕೆರೆ ಬಳಿ ಗೆಳೆಯನೊಂದಿಗೆ ಆಟವಾಡಲು ತೆರಳಿದ್ದಾಗ ಅಲ್ಲೇ ಕಾಣಿಸಿದ ಹಾವೊಂದನ್ನು ಕೈಯಿಂದ ಹಿಡಿದು ಹಾವಿನ ಜೊತೆಗೆ ಚೆಲ್ಲಾಟವಾಡಲು ಶುರುಮಾಡಿದ್ದಾನೆ. ಇದೇ ವೇಳೆ ರೊಚ್ಚಿಗೆದ್ದ ಹಾವು ಯುವಕನ ಕಾಲಿಗೆ ಕಡಿದಿದ್ದು, ಹಾವು ಕಡಿತದಿಂದ ತೀವ್ರ ಅಸ್ವಸ್ಥನಾದ ಈತನಿಗೆ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.

ಆದರೆ ಮೃತ ಯುವಕನ ತಂದೆ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಇಲ್ಲಿನ ನಗರ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರ ತಂಡ ತನಿಖೆ ಮುಂದುವರೆಸಿದೆ.

ABOUT THE AUTHOR

...view details