ಬಸವಕಲ್ಯಾಣ (ಬೀದರ್):ಮಳೆಯಲ್ಲಿ ಚಲಿಸುತ್ತಿರುವಾಗ ಬೈಕ್ನಿಂದ ಬಿದ್ದು ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಇಲ್ಲಿನ ಮಿನಿ ವಿಧಾನಸೌಧದ ಬಳಿ ನಡೆದಿದೆ.
ಭಾಲ್ಕಿ ತಾಲೂಕಿನ ಖಟಕ ಚಿಂಚೋಳ ಗ್ರಾಮದ ಸವಿತಾ ಹನುಮಂತ ಮೇತ್ರೆ (40) ಮೃತ ಮಹಿಳೆ. ತನ್ನ ಮಗನ ಜೊತೆ ಬೈಕ್ನಲ್ಲಿ ಹಿಂಬದಿ ಕುಳಿತು ತಾಲೂಕಿನ ಸಸ್ತಾಪೂರ ಗ್ರಾಮಕ್ಕೆ ಮಹಿಳೆ ತೆರಳುತ್ತಿದ್ದರು. ಮಳೆ ಹಿನ್ನೆಲೆ ರಸ್ತೆ ಮೇಲೆ ನಿಂತ ನೀರಿನಿಂದಾಗಿ ರಸ್ತೆ ಉಬ್ಬು( ಸ್ಪೀಡ್ ಬ್ರೇಕರ್ ) ಕಾಣಿಸದ ಕಾರಣ ಬೈಕ್ ಜಂಪ್ ಆಗಿದೆ. ವೇಗದಲ್ಲಿ ಬೈಕ್ ಜಂಪ್ ಆದ ಹಿನ್ನೆಲೆ ಹಿಂಬದಿ ಕುಳಿತಿದ್ದ ಮಹಿಳೆ ಜಾರಿ ಬಿದ್ದಿದ್ದಾರೆ.