ಬಸವಕಲ್ಯಾಣ (ಬೀದರ್): ಮೊಬೈಲ್ನಲ್ಲಿ ಸದಾ ಪಬ್ಜಿ ಗೇಮ್ ಆಡುತಿದ್ದ ಬಾಲಕನಿಗೆ ಅದನ್ನ ಬಿಟ್ಟು ಬಿಡುವಂತೆ ಪೋಷಕರು ಬುದ್ದಿ ಮಾತು ಹೇಳಿದ್ದಕ್ಕೆ ಕೋಪಗೊಂಡ ಬಾಲಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ರಾಜೇಶ್ವರ ಗ್ರಾಮದ ರಾಹುಲ ವಿಶ್ವನಾಥ ಗುತ್ತೇದಾರ (17) ಆತ್ಮಹತ್ಯೆಗೆ ಶರಣಾದ ಬಾಲಕ. ತಂದೆ, ತಾಯಿಗೆ ಒಬ್ಬನೇ ಪುತ್ರನಾಗಿರುವ ಈತ ಬಹುಕಾಲ ಮೊಬೈಲ್ನಲ್ಲಿ ಗೇಮ್ ಆಡುವುದರಲ್ಲಿಯೇ ಕಾಲ ಕಳೆಯುತ್ತಿದ್ದ. ಮಗನ ವರ್ತನೆಯಿಂದ ಬೇಸತ್ತ ಪಾಲಕರು ಮೊಬೈಲ್ನಿಂದ ದೂರ ಇರುವಂತೆ ಬೈದು ಬುದ್ದಿಮಾತು ಹೇಳಿದ್ದಾರೆ.