ಕರ್ನಾಟಕ

karnataka

ETV Bharat / state

ಆಸ್ತಿ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿ ಕೊಲೆ, ಬೆಚ್ಚಿಬಿದ್ದ ಗ್ರಾಮಸ್ಥರು! - bidar news

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಆಸ್ತಿ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿ ಕೊಲೆ..ಬೆಚ್ಚಿಬಿದ್ದ ಗ್ರಾಮಸ್ಥರು.!

By

Published : Sep 22, 2019, 6:27 PM IST

ಬೀದರ್:ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಆಸ್ತಿ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿ ಕೊಲೆ..ಬೆಚ್ಚಿಬಿದ್ದ ಗ್ರಾಮಸ್ಥರು.!

ಸದಾನಂದ ನಿಂಗದ (65) ಕೊಲೆಯಾದ ವ್ಯಕ್ತಿ.

ಮನೆ ಜಾಗದ ಸಂಬಂಧ ಸಹೋದರ ಸಂಬಂಧಿಗಳ ನಡುವೆ ವಿವಾದವಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ವಾದ, ವಿವಾದ ನಡೆದಿದ್ದು,ಈ ಮಧ್ಯೆ ಆಕಾಶ್​ ನಿಂಗದ ಎನ್ನುವ ಯುವಕ ಮಚ್ಚಿನಿಂದ ಹೊಡೆದು ಸದಾನಂದ ಎಂಬುವವರನ್ನು ಕೊಲೆ ಮಾಡಿದ್ದಾನೆ.

ಈ ಕುರಿತು ಮೃತನ ಸಂಬಂಧಿಕರು ನೀಡಿದ ದೂರಿನ ಮೇಲೆ ಆಕಾಶ್​ ಸೇರಿದಂತೆ ಇತರ ಐವರ ವಿರುದ್ಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸ್‌ರು ಬಲೆ ಬೀಸಿದ್ದಾರೆ.

ಹುಮನಾಬಾದ್​ ಡಿವೈಎಸ್ಪಿ ಮಹೇಶ್ವರಪ್ಪ, ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್, ಗ್ರಾಮೀಣ ಠಾಣೆ ಪಿಎಸ್ಐ ಅರುಣಕುಮಾರ್​​ ಸೇರಿದಂತೆ ಪೊಲೀಸ್​ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details