ಬಸವಕಲ್ಯಾಣ: ತೀರ್ಥ ಯಾತ್ರೆಗೆಂದು ತೆರಳಿದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ತೀರ್ಥ ಯಾತ್ರೆಗೆ ತೆರಳಿದ ವ್ಯಕ್ತಿ ಹೃದಯಾಘಾತಕ್ಕೆ ಬಲಿ - basavakalyana bidar latest news
ತೀರ್ಥ ಯಾತ್ರೆಗೆಂದು ತೆರಳಿದ ಮಂಠಾಳ ಗ್ರಾಮದ ಸಂಗಯ್ಯ ಪಂಚಾಕ್ಷರಯ್ಯ ಹಿರೇಮಠ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ ಬಸವಕಲ್ಯಾಣದಲ್ಲಿ ನಡೆದಿದೆ.
ತೀರ್ಥ ಯಾತ್ರೆಗೆ ತೆರಳಿದ ವ್ಯಕ್ತಿ ಹೃದಯಾಘಾತಕ್ಕೆ ಬಲಿ
ತಾಲೂಕಿನ ಮಂಠಾಳ ಗ್ರಾಮದ ಸಂಗಯ್ಯ ಪಂಚಾಕ್ಷರಯ್ಯ ಹಿರೇಮಠ (66) ಮೃತ ವ್ಯಕ್ತಿ. ಕಳೆದ 11 ದಿನಗಳ ಹಿಂದೆ ರಾಮೇಶ್ವರ ಯಾತ್ರೆಗೆ ತೆರಳಿದ್ದರು. ಯಾತ್ರೆ ಮುಗಿಸಿಕೊಂಡು ಶುಕ್ರವಾರ ಹಿಂದಿರುಗುವಾಗ ಮಾರ್ಗ ಮಧ್ಯೆ ಸಂಭವಿಸಿದ ಹೃದಯಾಪಘಾತಕ್ಕೆ ಬಲಿಯಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.