ಬೀದರ್: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಾಂಜ್ರಾ ನದಿಯಲ್ಲಿ ಮೊಂಡು ಧೈರ್ಯ ತೋರಿ ಸೇತುವೆ ದಾಟಲು ಯತ್ನಿಸಿದ ವ್ಯಕ್ತಿಯೊಬ್ಬ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾನೆ.
VIDEO - ದುಸ್ಸಾಹಸ ತೋರಿ ಮಾಂಜ್ರಾ ನದಿ ದಾಟಲು ಮುಂದಾದ ವ್ಯಕ್ತಿ ನೀರುಪಾಲು - ಬೀದರ್ ಮಳೆ ಸುದ್ದಿ
ಹುಚ್ಚು ಧೈರ್ಯದಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಾಂಜ್ರಾ ಸೇತುವೆ ದಾಟಲು ಯತ್ನಿಸಿದ ವ್ಯಕ್ತಿ ನೀರು ಪಾಲಾದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಈ ಘಟನೆ ನಡೆದಿದ್ದು, ಈವರೆಗೆ ವ್ಯಕ್ತಿ ಪತ್ತೆಯಾಗಿಲ್ಲ.
ಮಾಂಜ್ರಾ ನದಿ
ಜಿಲ್ಲೆಯ ಭಾಲ್ಕಿ ತಾಲೂಕಿನ ಲಖನಗಾಂವ್ ಗ್ರಾಮದ ಜ್ಞಾನೇಶ್ವರ ಸ್ವರೂಪರಾವ್(50) ನೀರು ಪಾಲಾದ ವ್ಯಕ್ತಿ. ಜ್ಞಾನೇಶ್ವರ್ ತುಂಬಿ ಹರಿಯುತ್ತಿರುವ ಲಖನಗಾಂವ್- ಸೋನಾಳ ನಡುವಿನ ಮಾಂಜ್ರಾ ಸೇತುವೆ ದಾಟಲು ಪ್ರಯತ್ನಿಸಿದ್ದಾರೆ. ಆದ್ರೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.
ಬುಧವಾರ ಈ ಘಟನೆ ನಡೆದಿದ್ದು ಇಲ್ಲಿಯವರೆಗೆ ವ್ಯಕ್ತಿ ಪತ್ತೆಯಾಗಿಲ್ಲ. ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.