ಬಸವಕಲ್ಯಾಣ (ಬೀದರ್):ಜಮೀನು ಮಾರಿದ ಹಣ ನೀಡಲಿಲ್ಲವೆಂದು ಮನನೊಂದ ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುತ್ತಿ ಗ್ರಾಮದಲ್ಲಿ ನಡೆದಿದೆ.
ಮಾರಾಟ ಮಾಡಿದ ಜಮೀನಿನ ಹಣ ಸಿಗಲಿಲ್ಲವೆಂದು ಮನನೊಂದ ರೈತ ಆತ್ಮಹತ್ಯೆ - money for farmland sold
ಬಸವಕಲ್ಯಾಣ ತಾಲೂಕಿನ ಗುತ್ತಿ ಗ್ರಾಮದ ಕೃಷ್ಣಾಜಿ ಹಣಮಂತರಾವ ಬಿರಾದಾರ ಎಂಬುವರು ತಮ್ಮ 1 ಎಕರೆ ಜಮೀನನ್ನು 12 ಲಕ್ಷ ರೂ.ಗೆ ಮಾರಾಟ ಮಾಡಿದ್ರು. ಆದ್ರೆ ಸಂಪೂರ್ಣ ಹಣ ಸಿಗಲಿಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
![ಮಾರಾಟ ಮಾಡಿದ ಜಮೀನಿನ ಹಣ ಸಿಗಲಿಲ್ಲವೆಂದು ಮನನೊಂದ ರೈತ ಆತ್ಮಹತ್ಯೆ ರೈತ ಆತ್ಮಹತ್ಯೆ](https://etvbharatimages.akamaized.net/etvbharat/prod-images/768-512-7786469-thumbnail-3x2-news.jpg)
ಗ್ರಾಮದ ಕೃಷ್ಣಾಜಿ ಹಣಮಂತರಾವ ಬಿರಾದಾರ (48) ಜಮೀನಿನ ಮರಕ್ಕೆ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಗಳ ಮದುವೆ ಸಂಬಂಧ ಹಣದ ಅಡಚಣೆ ಇದ್ದ ಕಾರಣ ಪಕ್ಕದ ಖಂಡಾಳ ಗ್ರಾಮದ ಕಾಶಪ್ಪ ಮೇತ್ರೆ ಎನ್ನುವಾತನಿಗೆ 1 ಎಕರೆ ಜಮೀನನ್ನು 12 ಲಕ್ಷ ರೂ. ಬೆಲೆಗೆ ಮಾರಾಟ ಮಾಡಲಾಗಿತ್ತು.
ಮುಂಗಡವಾಗಿ 4 ಲಕ್ಷ ರೂ. ಪಡೆಯಲಾಗಿತ್ತು. ಆದರೆ, ಉಳಿದ ಹಣ ನೀಡುವಂತೆ ಪದೇ, ಪದೇ ಕೇಳಿದರೂ ಹಣ ನೀಡಿರಲಿಲ್ಲ. ಮಾರಾಟ ಮಾಡಿದ 1 ಎಕರೆ ಜಮೀನಿನ ಬದಲಾಗಿ ಮತ್ತೊಂದು ಎಕರೆ ಜಮೀನು ಕೂಡ ಕಬ್ಜಾ ಮಾಡಲಾಗಿದೆ ಎಂದು ಮೃತನ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಲಸೂರ ಠಾಣೆ ಪೊಲೀಸರ ತಂಡ, ಆರೋಪಿ ಬಂಧನಕ್ಕೆ ಜಾಲ ಬಿಸಿದೆ.