ಬೀದರ್: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು 97 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಬೀದರ್: 97 ಮಂದಿಗೆ ಸೋಂಕು, ಓರ್ವ ಬಲಿ - ಬೀದರ್ ಲೆಟೆಸ್ಟ್ ನ್ಯೂಸ್
97 ಮಂದಿಗೆ ಸೋಂಕು ತಗುಲಿದ್ದು ಓರ್ವ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,345 ಮತ್ತು ಮೃತರ ಸಂಖ್ಯೆ 104ಕ್ಕೇರಿದೆ.
![ಬೀದರ್: 97 ಮಂದಿಗೆ ಸೋಂಕು, ಓರ್ವ ಬಲಿ Bidar corona case](https://etvbharatimages.akamaized.net/etvbharat/prod-images/768-512-07:53:00:1597414980-kn-bdr-03-14-coronaupdatebidar-7203280-av-01-14082020194859-1408f-1597414739-422.jpg)
Bidar corona case
ಜಿಲ್ಲೆಯ ಔರಾದ್‌ನಲ್ಲಿ14, ಬಸವಕಲ್ಯಾಣ 5, ಭಾಲ್ಕಿ16, ಬೀದರ್ 46, ಹುಮನಾಬಾದ್ 16 ಜನರಲ್ಲಿ ಸೋಂಕು ಪತ್ತೆಯಾಗಿ ಸೋಂಕಿತರ ಸಂಖ್ಯೆ 3,345ಕ್ಕೆ ಏರಿಕೆಯಾಗಿದೆ.
76 ಸೋಂಕಿತರು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ. ಈವರೆಗೆ ಒಟ್ಟು 2,364 ಮಂದಿ ಕೊರೊನಾ ಗೆದ್ದು ಬಂದಿದ್ದಾರೆ. ಇಲ್ಲಿಯವರೆಗೆ 104 ಜನರು ಬಲಿಯಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.