ಬೀದರ್: ಕೊವಿಡ್-19 ಅಟ್ಟಹಾಸ ಮುಂದುವರೆದಿದ್ದು, ಜಿಲ್ಲೆಯಲ್ಲಿಂದು 94 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 3885ಕ್ಕೆ ಏರಿಕೆಯಾಗಿದೆ.
94 ಜನರಿಗೆ ಸೋಂಕು ದೃಢ....ಬೀದರ್ ನಲ್ಲಿ ಸೋಂಕಿತರ ಸಂಖ್ಯೆ 3885ಕ್ಕೆ ಏರಿಕೆ - Bidar latest news
ಜಿಲ್ಲೆಯಲ್ಲಿಂದು 94 ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 3885ಕ್ಕೆ ಏರಿಕೆಯಾಗಿದೆ. ಈ ಪೈಕಿ 2830 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.
Bidar corona cases
ಜಿಲ್ಲೆಯ ಔರಾದ್ ನಲ್ಲಿ 23, ಬಸವಕಲ್ಯಾಣದಲ್ಲಿ 7, ಭಾಲ್ಕಿಯಲ್ಲಿ 13, ಬೀದರ್ ನಲ್ಲಿ 46, ಹುಮನಾಬಾದ್ ನಲ್ಲಿ 4 ಹಾಗು ಅನ್ಯ ರಾಜ್ಯದಿಂದ ಬಂದ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಇಂದು 107 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 2830 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಒಟ್ಟು 119 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.