ಬೀದರ್: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು 85 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,392ಕ್ಕೆ ಏರಿಕೆಯಾಗಿದೆ.
ಬೀದರ್: 85 ಜನರಿಗೆ ಸೋಂಕು ದೃಢ - Bidar latest news
85 ಕೊರೊನಾ ಪ್ರಕರಣಗಳು ಪತ್ತೆಯಾಗಿ, ಸೋಂಕಿತರ ಸಂಖ್ಯೆ 4,392ಕ್ಕೆ ಏರಿಕೆಯಾಗಿದೆ.
Bidar corona cases
ಜಿಲ್ಲೆಯ ಔರಾದ್- 16, ಬಸವಕಲ್ಯಾಣ- 19, ಭಾಲ್ಕಿ-14, ಬೀದರ್-19, ಹುಮನಾಬಾದ್-17 ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಇಂದು 19 ಸೋಂಕಿತರು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ. ಒಟ್ಟು 4,392 ಸೋಂಕಿತರ ಪೈಕಿ 3,611 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. 133 ಜನರು ಬಲಿಯಾಗಿದ್ದಾರೆ. ಸದ್ಯ 644 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.