ಕರ್ನಾಟಕ

karnataka

ETV Bharat / state

ಬೀದರ್​​​​ನಲ್ಲಿ ಕೊರೊನಾ ಅಟ್ಟಹಾಸ: ಇಂದು 44 ಕೇಸ್​ ಪತ್ತೆ, 8 ಮಂದಿ ಬಲಿ! - death of Corona

ಬೀದರ್​​ನಲ್ಲಿ ಕೊರೊನಾದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು ಮತ್ತೆ 8 ಮಂದಿ ಮಹಾಮಾರಿಗೆ ಬಲಿಯಾದರೆ, ಜಿಲ್ಲೆಯಲ್ಲಿ 44 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

8 People who died from coronavirus In a single day at Bidar
ಬೀದರ್​​​​ನಲ್ಲಿ ಕೊರೊನಾ ಅಟ್ಟಹಾಸ..ಒಂದೇ ದಿನ ಮಹಾಮಾರಿಗೆ 8 ಮಂದಿ ಬಲಿ

By

Published : Jul 6, 2020, 8:31 PM IST

ಬೀದರ್: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 8 ಮಂದಿ ಬಲಿಯಾಗಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಶನಿವಾರ 06, ಭಾನುವಾರ 09 ಹಾಗೂ ಇಂದು ಒಂದೇ ದಿನ 08 ಜನರು ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಬಸವಕಲ್ಯಾಣ ನಗರದ ಹುಸೇನ್ ಕಾಲೋನಿಯ 40 ವರ್ಷದ ವ್ಯಕ್ತಿ, ಬೀದರ್ ನಗರದ ಮುಲ್ತಾನಿ ಕಾಲೋನಿಯ 65 ವರ್ಷದ ವೃದ್ಧೆ, ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ 90 ವರ್ಷದ ವೃದ್ಧ, ಔರಾದ್ ತಾಲೂಕಿನ ಜಮಾಲಪುರ್ ಗ್ರಾಮದ 75 ವರ್ಷದ ವೃದ್ಧ, ಬೀದರ್ ನಗರದ ಮುಲ್ತಾನಿ ಕಾಲೋನಿಯ 70 ವರ್ಷದ ವೃದ್ಧ ಬಲಿಯಾಗಿದ್ದಾರೆ.

ಅಲ್ಲದೆ ಭಾಲ್ಕಿ ತಾಲೂಕಿನ ಕುಂಟೆ ಶಿರ್ಸಿ ಗ್ರಾಮದ 22 ವರ್ಷದ ಯುವಕ, ಬೀದರ್ ತಾಲೂಕಿನ ಶಿರಸಿ ಗ್ರಾಮದ 65 ವರ್ಷದ ಮಹಿಳೆ ಹಾಗೂ ಬೀದರ್ ತಾಲೂಕಿನ ಅಮಲಾಪೂರ್ ಗ್ರಾಮದ 64 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಇಂದು ಹೊಸ 44 ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 799ಕ್ಕೆ ಏರಿಕೆ ಕಂಡಿದೆ. ಅಲ್ಲದೆ ಒಟ್ಟು 561 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ABOUT THE AUTHOR

...view details