ಬೀದರ್:72 ನೇಯ ಗಣರಾಜ್ಯೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಧ್ವಜಾರೋಹಣ ನೆರವೇರಿಸಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆಯಲ್ಲಿ ಪೊಲೀಸ್ ತುಕಡಿ, ಅಬಕಾರಿ ತುಕಡಿ, ಕೆ.ಎಸ್ ಆರ್ ಪಿ ತುಕಡಿ ಹಾಗೂ ನಾಗರೀಕ ಸೇವಾ ತುಕಡಿ ಸೇರಿದಂತೆ 7 ತಂಡಗಳ ಕವಾಯತು ಗಮನ ಸೆಳೆಯಿತು.