ಕರ್ನಾಟಕ

karnataka

ETV Bharat / state

ಬೀದರ್​​: ರಸ್ತೆ ಗುಂಡಿ ಮುಚ್ಚಿ ಮಾದರಿಯಾದ ಪುಟ್ಟ ಪೋರ!

ಬೀದರ್​ನಲ್ಲಿ ಮಳೆ ನೀರು ರಸ್ತೆಗಳಲ್ಲಿ ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಏಳು ವರ್ಷದ ಬಾಲಕನೋರ್ವ ರಸ್ತೆ ಗುಂಡಿಗಳನ್ನು ಮುಚ್ಚಿ ಸಮಾಜಮುಖಿ ಕಾರ್ಯ ಮಾಡಿದ್ದಾನೆ.

ರಸ್ತೆ ಗುಂಡಿಗಳು ಮುಚ್ಚಿದ  ಏಳರ ಪೋರ
ರಸ್ತೆ ಗುಂಡಿಗಳು ಮುಚ್ಚಿದ ಏಳರ ಪೋರ

By

Published : Aug 21, 2020, 2:10 PM IST

Updated : Aug 21, 2020, 2:35 PM IST

ಬೀದರ್: ಜಿಲ್ಲೆಯಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ಗುಂಡಿಗಳಿದ್ದರೂ ಕಾಣದೆ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಬೀದರ್​ನ ಏಳು ವರ್ಷದ ಬಾಲಕನೋರ್ವ ರಸ್ತೆ ಗುಂಡಿಗಳನ್ನು ಮುಚ್ಚಿ ಸಮಾಜಮುಖಿ ಕಾರ್ಯ ಮಾಡಿದ್ದಾನೆ.

ನಗರದ ಅಶೋಕ ಹೋಟೆಲ್​ನಿಂದ ಮೈಲೂರು ಕ್ರಾಸ್​ಗೆ ಹೊಗುವ ದಾರಿ ಮಧ್ಯೆ ರೈಲ್ವೆ ಸೇತುವೆಯಿದೆ. ಇದರ ಕೆಳ ಭಾಗದಲ್ಲಿ ಮಳೆ ನೀರು ನಿಂತು ಅವಾಂತರವಾಗಿತ್ತು. ಈ ರಸ್ತೆ ಮೂಲಕ ಕಾಲ್ನಡಿಗೆಯಲ್ಲಿ ಮನೆಗೆ ಹೋಗುತ್ತಿದ್ದ ಬಾಲಕ ಬೈಕ್​ ಸವಾರರ ಕಷ್ಟವನ್ನು ಕಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸ್ವತಃ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾನೆ.

ರಸ್ತೆ ಗುಂಡಿ ಮುಚ್ಚಿದ ಬೀದರ್​ನ ಬಾಲಕ

ರಸ್ತೆಯಲ್ಲಿ ನಿಂತಿದ್ದ ನೀರು ಹೊರ ಹಾಕಲು ಚರಂಡಿಗೆ ಬಳಿ ಇದ್ದ ಕಸ ತೆಗೆದಿದ್ದಾನೆ. ನಂತರ ಗುಂಡಿ ಪಕ್ಕದಲ್ಲೇ ಇದ್ದ ಜಲ್ಲಿ ಕಲ್ಲು ಹಾಗೂ ಮರಳನ್ನು ದಪ್ಪವಾದ ಕಾಗದದ ತಗಡಿನಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಷ್ಟು ತಂದು ಈ ಗುಂಡಿಗಳಿಗೆ ಹಾಕಿದ್ದಾನೆ. ಮಳೆ ಸುರಿಯುತ್ತಿದ್ದರೂ ಕ್ಯಾರೆ ಎನ್ನದೆ ತನ್ನ ಕಾರ್ಯದಲ್ಲಿ ಬಾಲಕ ತೊಡಗಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ರಸ್ತೆ ಗುಂಡಿಗಳು ಮುಚ್ಚಿದ ಏಳರ ಪೋರ

ಈ ಬಾಲಕನ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ಕೆಲಸ ನೀನು ಯಾಕೆ ಮಾಡುತ್ತೀಯಾ, ಅಧಿಕಾರಿಗಳು ಮಾಡುತ್ತಾರೆ ಎಂದಾಗ ಈ ಬಾಲಕ ಹೇಳಿದ ಉತ್ತರ, ಬೈಕ್ ಸವಾರರು ಬಿದ್ದು ಅಪಘಾತಕ್ಕೀಡಾಗ್ತಾರೆ. ಹಾಗಾಗಿ ಈ ಕೆಲಸ ನಾನೇ ಮಾಡುತ್ತಿದ್ದೇನೆ ಎಂದಿದ್ದಾನೆ.

Last Updated : Aug 21, 2020, 2:35 PM IST

ABOUT THE AUTHOR

...view details