ಬೀದರ್: ಕೊರೊನಾ ಬೆಂಬಿಡದೆ ಗಡಿ ಜಿಲ್ಲೆ ಬೀದರ್ ನಗರವನ್ನು ಕಾಡುತ್ತಿದ್ದು, ಬೆಳಿಗ್ಗೆ ಕೊರೊನಾ ಬುಲೆಟಿನ್ನಲ್ಲಿ 4 ಪ್ರಕರಣ ಪತ್ತೆಯಾದ್ರೆ, ಸಂಜೆ ಮತ್ತೆ 3 ಹೊಸ ಪ್ರಕರಣ ದಾಖಲಾಗಿದೆ. ಒಂದೇ ದಿನ 7 ಜನರಲ್ಲಿ ಸೋಂಕು ಪತ್ತೆಯಾದ ವರದಿಯಾಗಿದ್ದು, ಈ ಮೂಲಕ ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48ಕ್ಕೆರಿದೆ.
ನಗರದ ಓಲ್ಡ್ ಸಿಟಿಯ ಕಂಟೇನ್ಮೆಂಟ್ ಏರಿಯಾದಲ್ಲಿ ಜಿಲ್ಲಾಡಳಿತ ನಡೆಸಿದ ಸಾಮೂಹಿಕ ವೈದ್ಯಕೀಯ ತಪಾಸಣೆಯಿಂದ ಬುಧವಾದ 12 ಪ್ರಕರಣ ಪತ್ತೆಯಾಗಿತ್ತು. ಈ ಪೈಕಿ ಗುರುವಾರ ಸಂಜೆ ಪ್ರಕಟವಾದ ಕೊರೊನಾ ಬುಲೆಟಿನ್ನಲ್ಲಿ ಸೋಂಕಿತರ ಸಂಖ್ಯೆ 959ರ ಸಂಪರ್ಕದಲ್ಲಿ ಬಂದ 36 ವಯಸ್ಸಿನ ಮಹಿಳೆ, 18 ಮತ್ತು 16 ವಯಸ್ಸಿನ ಇಬ್ಬರು ಗಂಡು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.