ಬೀದರ್: ಕೊರೊನಾ ವೈರಸ್ ನಿಯಂತ್ರಿಸಲು ತಮ್ಮ ಕ್ಷೇತ್ರದ ಜನರಿಗೆ ಸ್ಯಾನಿಟೈಸರ್ ಸೋಪ್ ಹಾಗೂ ಮಾಸ್ಕ್ ಖರೀದಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ 65 ಲಕ್ಷ ರೂಪಾಯಿ ಅನುದಾನ ಬಳಕೆ ಮಾಡಿಕೊಳ್ಳಲು ಡಿಸಿಗೆ ಪತ್ರ ಬರೆದಿದ್ದಾರೆ.
ಕ್ಷೇತ್ರದ ಜನರಿಗೆ ಸ್ಯಾನಿಟೈಸರ್ ಸೋಪ್-ಮಾಸ್ಕ್ ಖರೀದಿಗೆ ಬಂಡೆಪ್ಪ ಕಾಶೆಂಪೂರ್ ಅನುದಾನ - ಕ್ಷೇತ್ರದ ಜನರಿಗೆ ಸ್ಯಾನಿಟೈಸರ್ ಸೊಪ್ ಹಾಗೂ ಮಾಸ್ಕ್
ಕೊರೊನಾ ವೈರಸ್ ನಿಯಂತ್ರಿಸಲು ತಮ್ಮ ಕ್ಷೇತ್ರದ ಜನರಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಖರೀದಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ 65 ಲಕ್ಷ ರೂಪಾಯಿ ಅನುದಾನವನ್ನು ಶಾಸಕರ ಅಭಿವೃದ್ಧಿ ನಿಧಿಯಿಂದ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹದೇವ್ ಅವರಿಗೆ ಪತ್ರ ಬರೆದಿರುವ ಅವರು, ಕೋವಿಡ್-19 ಸೋಂಕು ತಡೆಗಟ್ಟಲು ಶಾಸಕರ ನಿಧಿಯಿಂದ ಕ್ಷೇತ್ರದ ಪ್ರತಿಯೊಂದು ಮನೆಯಲ್ಲೂ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಣೆ ಮಾಡುವಂತೆ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಜನರಿಗೆ ಸ್ಯಾನಿಟೈಸರ್ ಸರಬರಾಜು ಮಾಡಿದ್ರೆ ದುರ್ಬಳಕೆ ಆಗುತ್ತೆ. ಹೀಗಾಗಿ 2 ಲಕ್ಷ ಸ್ಯಾನಿಟೈಸರ್ ಸೋಪ್ ವಿತರಿಸಬೇಕು. ಅಲ್ಲದೆ 60 ಸಾವಿರ ಮರು ಬಳಕೆಯಾಗುವಂತಹ ಮಾಸ್ಕ್ ನೀಡಬೇಕು. ಏಕೆಂದರೆ ಲಾಕ್ಡೌನ್ ಮುಗಿದ ಮೇಲೆ ಇದರ ಬಳಕೆ ಅಗತ್ಯವಾಗಿದೆ. ಅದಕ್ಕಾಗಿ ಕ್ಷೇತ್ರದ ಜನರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಶಾಸಕರ ಅಭಿವೃದ್ಧಿ ಅನುದಾನ ಬಳಕೆ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ.